ಬುಧವಾರ, ಡಿಸೆಂಬರ್ 11, 2019
26 °C

ಕೋಮು ಹಿಂಸಾಚಾರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಮು ಹಿಂಸಾಚಾರ ಹೆಚ್ಚಳ

ನವದೆಹಲಿ: ಕಳೆದ ವರ್ಷ (2017) ದೇಶದಲ್ಲಿ ಕೋಮು ಹಿಂಸಾಚಾರ ಪ್ರಮಾಣ ಶೇ 15ರಷ್ಟು ಹೆಚ್ಚಾಗಿದೆ.

ಅತೀ ಹೆಚ್ಚು ಕೋಮು ಗಲಭೆಗಳು ನಡೆದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ಮೊದಲೆರಡು ಸ್ಥಾನಗಳಲ್ಲಿವೆ. ರಾಜಸ್ಥಾನ ಮೂರನೇ ಸ್ಥಾನದಲ್ಲಿದೆ. ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ಗಳು ನಂತರದ ಸ್ಥಾನ ಪಡೆದಿವೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್‌ ಅಹಿರ್‌ ಅವರು ಲೋಕಸಭೆಗೆ ನೀಡಿರುವ ಲಿಖಿತ ಪ್ರತಿಕ್ರಿಯೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ 2017ರಲ್ಲಿ ಕೋಮು ಗಲಭೆ ಪ್ರಕರಣಗಳಲ್ಲಿ ಇಳಿಕೆಯಾಗಿದೆ.

822

2017ರಲ್ಲಿ ದೇಶದಲ್ಲಿ ನಡೆದ ಕೋಮು ಹಿಂಸಾಚಾರ ಪ್ರಕರಣಗಳು

111

ಗಲಭೆಯಲ್ಲಿ ಪ್ರಾಣಕಳೆದುಕೊಂಡವರು

2,384

ಗಾಯಗೊಂಡವರ ಸಂಖ್ಯೆ

703

2016ರಲ್ಲಿ ನಡೆದ ಕೋಮುಗಲಭೆಗಳು

86

ಮೃತಪಟ್ಟವರ ಸಂಖ್ಯೆ

2,321

ಗಾಯಗೊಂಡವರು

 

751

2015ರಲ್ಲಿ ನಡೆದ ಹಿಂಸಾಚಾರ ಪ್ರಕರಣಗಳು

97

ಪ್ರಾಣಕಳೆದುಕೊಂಡವರು

2,264

ಗಾಯಗೊಂಡವರ ಸಂಖ್ಯೆ

––––––––––

 

ಉತ್ತರ ಪ್ರದೇಶ

ಹಿಂಸಾಚಾರ ಪ್ರಕರಣಗಳು

2017–195

2016–162

2015–155

ಮೃತಪಟ್ಟವರು

2017–44

2016–29

2015–22

 

–––––––

ಕರ್ನಾಟಕ

2017–100

2016–101

2015–105

ಮೃತಪಟ್ಟವರು

2017–9

2016–12

2015–8

ಪ್ರತಿಕ್ರಿಯಿಸಿ (+)