ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಿಕಾಗೊ ವಿ.ವಿ ಜತೆ ಒಪ್ಪಂದ

Last Updated 7 ಫೆಬ್ರುವರಿ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರದ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರ ಕಂಡುಹಿಡಿಯಲು ರಾಜ್ಯ ಸರ್ಕಾರವು ಷಿಕಾಗೊ ವಿಶ್ವವಿದ್ಯಾಲಯದ ಜತೆ ಬುಧವಾರ ಒಪ್ಪಂದ ಮಾಡಿಕೊಂಡಿದೆ.

‘ಮಹಾನಗರದ ಅನ್ವೇಷಣಾ ಸವಾಲುಗಳು’ ಎಂಬ ಘೋಷವಾಕ್ಯವನ್ನು ಹೊಂದಿರುವ ಈ ಒಪ್ಪಂದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮತ್ತು ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಅದಿತಿ ಮೋದಿ ಸಹಿ ಹಾಕಿದರು.

‘ನಗರವು ರಾಜ್ಯದ ಅಭಿವೃದ್ಧಿಯ ಎಂಜಿನ್‌ ಇದ್ದಂತೆ. ಇಲ್ಲಿ ಹಲವು ಮೂಲಸೌಕರ್ಯದ ಸಮಸ್ಯೆಗಳಿದೆ. ಸಂಚಾರ ದಟ್ಟಣೆ ಸಮಸ್ಯೆ ವಿಪರೀತ
ವಾಗಿದೆ.  ಇವುಗಳ ನಿವಾರಣೆಗೆ ನಾಗರಿಕ ಸಮಾಜವೂ ಕೈಜೋಡಿಸುವಂತೆ ಮಾಡಬೇಕಿದೆ’ ಎಂದರು.

‘ನಗರದ ಅಭಿವೃದ್ಧಿಗೆ ಸುಸ್ಥಿರ ಪರಿಹಾರ ನೀತಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ನವೋದ್ಯಮಗಳು, ನಗರ ತಜ್ಞರು ಮತ್ತು ಸಂಶೋಧಕರಿಂದ ಮಾದರಿ ಸೂತ್ರಗಳನ್ನು ಆಹ್ವಾನಿಸಲಾಗುವುದು. ಅತ್ಯುತ್ತಮ ಮಾದರಿ ಸೂತ್ರಕ್ಕೆ ₹ 1.5 ಕೋಟಿ ನೀಡಲಾಗುತ್ತದೆ’ ಎಂದರು.

‘ವಾಯುಮಾಲಿನ್ಯ ತಗ್ಗಿಸುವುದು, ಉತ್ತಮ ವಾಹನ ಸಂಚಾರ ನಿರ್ವಹಣೆ ಮತ್ತು ಘನ ತ್ಯಾಜ್ಯ ನಿರ್ವಹಣೆ ಅಭಿವೃದ್ಧಿಗೆ ಆದ್ಯತೆ ನೀಡುವ ಮಾದರಿ ಸೂತ್ರವನ್ನು ನಾವು ನಿರೀಕ್ಷಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT