ಬುಧವಾರ, ಡಿಸೆಂಬರ್ 11, 2019
23 °C

ಕ್ವೀನ್ಸ್ ಕ್ಲಬ್‌ನಲ್ಲಿ ಆಡಲಿರುವ ನಡಾಲ್‌

Published:
Updated:
ಕ್ವೀನ್ಸ್ ಕ್ಲಬ್‌ನಲ್ಲಿ ಆಡಲಿರುವ ನಡಾಲ್‌

ಲಂಡನ್‌ (ಎಎಫ್‌ಪಿ): ಸ್ಪೇನ್‌ನ ರಫೆಲ್ ನಡಾಲ್ ಜೂನ್‌ 18ರಂದು ಆರಂಭವಾ ಗಲಿರುವ ಕ್ವೀನ್ಸ್ ಕ್ಲಬ್‌ ಟೆನಿಸ್ ಚಾಂಪಿ ಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನ ಸಿದ್ಧತಾ ಟೂರ್ನಿ ಎಂದೇ ಹೇಳಲಾಗುವ ಕ್ವೀನ್ಸ್ ಕ್ಲಬ್‌ ಚಾಂಪಿಯನ್‌ಷಿಪ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಅವರು ಪಾಲ್ಗೊಂಡಿಲ್ಲ. 2016ರಲ್ಲಿ ಮಣಿಗಂಟಿನ ನೋವಿನಿಂದ ಬಳಲುತ್ತಿದ್ದ ನಡಾಲ್ ಕಳೆದ ವರ್ಷ ಫ್ರೆಂಚ್ ಓಪನ್ ಟೂರ್ನಿ ಗೆದ್ದು ವಿಶ್ರಾಂತಿ ಪಡೆಯುತ್ತಿದ್ದ ಕಾರಣ ಇಲ್ಲಿ ಕಣಕ್ಕೆ ಇಳಿದಿರಲಿಲ್ಲ.

2008ರಲ್ಲಿ ಮೊದಲ ಬಾರಿ ಇಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದರ ಹತ್ತನೇ ವರ್ಷಾಚರಣೆ ಆಗಿರುವುದರಿಂದ ಈ ಬಾರಿ ಆಡುವುದಾಗಿ ತಿಳಿಸಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಕ್ರೊವೇಷಿಯಾದ ಮರಿನ್ ಸಿಲಿಕ್‌ ವಿರುದ್ಧ ಕ್ವಾರ್ಟರ್ ಫೈನಲ್‌ ಪಂದ್ಯದ ಐದನೇ ಸೆಟ್‌ ನಂತರ ನಿವೃತ್ತರಾಗಿದ್ದರು. ಹೀಗಾಗಿ ಕ್ವೀನ್ಸ್‌ ಕ್ಲಬ್ ಚಾಂಪಿಯನ್‌ಷಿಪ್‌ನಲ್ಲಿ ಆಡುವುದರ ಬಗ್ಗೆ ಕುತೂಹಲವಿತ್ತು.

2008ರಲ್ಲಿ ಕ್ವೀನ್ಸ್‌ ಕ್ಲಬ್‌ನಲ್ಲಿ ಆಡಿದ ನಂತರ ರಫೆಲ್ ನಡಾಲ್ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು. ಹೀಗಾಗಿ ಈ ಟೂರ್ನಿ ಅವರಿಗೆ ಮಹತ್ವದ್ದಾಗಿದೆ.

ಪ್ರತಿಕ್ರಿಯಿಸಿ (+)