ಭಾನುವಾರ, ಜೂನ್ 7, 2020
29 °C

ಖುಷಿ ಕೊಡುವ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖುಷಿ ಕೊಡುವ ಬೆಳಕು

‘ದೇಶದ ಕೋಟ್ಯಂತರ ಮಹಿಳೆಯರ ಬಾಳಿನಲ್ಲಿ ಅರುಣೋದಯದ ಕಿರಣಗಳು ಹೊಸ ಭರವಸೆ ಮೂಡಿಸಲಿವೆ. ಬದಲಾವಣೆಯ ಕಾಲ ಸನ್ನಿಹಿತವಾಗಿದೆ...’– ಪ್ಯಾಡ್‌ಮನ್ ಚಿತ್ರ ತೆರೆ ಕಾಣುವ ಮುನ್ನಾದಿನ (ಫೆ.8) ಅಕ್ಷಯ್‌ಕುಮಾರ್‌ ತಮ್ಮ ‘ಇನ್‌ಸ್ಟಾಗ್ರಾಮ್‌’ ಖಾತೆಯಲ್ಲಿ ಸೂರ್ಯೋದಯ ನೋಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿ, ಹೀಗೆ ಒಕ್ಕಣೆ ಬರೆದುಕೊಂಡಿದ್ದಾರೆ.

‘ಶೇ18ರಷ್ಟು ಭಾರತೀಯ ಮಹಿಳೆಯರು ಮಾತ್ರವೇ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಈ ಪರಿಸ್ಥಿತಿ ಬದಲಾಗುವ ಕಾಲ ಸನ್ನಿಹಿತವಾಗಿದೆ’ ಎಂದು ಭರವಸೆ ಮಾತುಗಳನ್ನೂ ಹಂಚಿಕೊಂಡಿದ್ದಾರೆ.

ಚಿತ್ರ ನಿರ್ಮಿಸಿರುವ ಟ್ವಿಂಕಲ್ ಖನ್ನಾ ಅವರಿಗೆ ಹೊಸ ದಾಖಲೆ ನಿರ್ಮಿಸಿದ ಖುಷಿ. ‘ಬಾಲಿವುಡ್ ಚಿತ್ರವೊಂದು ಏಕಕಾಲಕ್ಕೆ ವಿಶ್ವದ 50 ದೇಶಗಳಲ್ಲಿ, ಅದರಲ್ಲಿಯೂ ರಷ್ಯಾ, ಐವರಿಕೋಸ್ಟ್ ಮತ್ತು ಇರಾಕ್‌ಗಳಲ್ಲಿ ಮೊದಲ ದಿನವೇ ತೆರೆ ಕಾಣುತ್ತಿರುವುದು ಇದೇ ಮೊದಲು. ಪ್ಯಾಡ್‌ಮನ್ ವಿಶ್ವಸುತ್ತುತ್ತಿದ್ದಾನೆ’ ಎಂದು ತಮ್ಮ ಟ್ವಿಟರ್‌ನಲ್ಲಿ ಖುಷಿಯಾಗಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.