ರಜನಿ ಜೊತೆ ಒಟ್ಟಾಗಿ ರಾಜಕೀಯ ಅಗತ್ಯ ಬಿದ್ದರೆ ಚಿಂತನೆ: ಕಮಲ್

7

ರಜನಿ ಜೊತೆ ಒಟ್ಟಾಗಿ ರಾಜಕೀಯ ಅಗತ್ಯ ಬಿದ್ದರೆ ಚಿಂತನೆ: ಕಮಲ್

Published:
Updated:
ರಜನಿ ಜೊತೆ ಒಟ್ಟಾಗಿ ರಾಜಕೀಯ ಅಗತ್ಯ ಬಿದ್ದರೆ ಚಿಂತನೆ: ಕಮಲ್

ಚೆನ್ನೈ: ‘ನಾನು ಮತ್ತು ರಜನಿಕಾಂತ್ ಅವರು ಒಟ್ಟಾಗಿ ಚುನಾವಣೆ ಎದುರಿಸುವ ಅಗತ್ಯ ಬಿದ್ದರೆ ಆ ಕುರಿತು ಚಿಂತನೆ ಮಾಡುತ್ತೇವೆ’ ಎಂದು ನಟ ಕಮಲ್ ಹಾಸನ್ ಅವರು ಗುರುವಾರ ಹೇಳಿದ್ದಾರೆ.

‘ಒಟ್ಟಾಗಿ ಚುನಾವಣೆ ಎದುರಿಸುತ್ತೀರೇ ಎಂಬ ಪ್ರಶ್ನೆ ಪದೇ ಪದೇ ಎದುರಾಗುತ್ತಿದೆ’ ಎಂದು ಕಮಲ್ ಹಾಸನ್ ಅವರು ತಮಿಳು ನಿಯತಕಾಲಿಕಕ್ಕೆ ಬರೆದ ಅಂಕಣದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರು ನಟ ರಜನಿಕಾಂತ್ ಅವರ ಪ್ರತಿಕ್ರಿಯೆ ಕೇಳಿದಾಗ, ‘ಕಾಲವೇ ಎಲ್ಲವನ್ನೂ ನಿರ್ಧರಿಸಲಿದೆ ಎಂದು ಈ ಹಿಂದೆಯೇ ನಿಮಗೆ ಹೇಳಿದ್ದೆ’ ಎಂದು ಉತ್ತರಿಸಿದ್ದಾರೆ.

‘ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಸೂಕ್ತ ಸಮಯದಲ್ಲಿ  ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ರಜನಿಕಾಂತ್ ಹೇಳಿದ್ದಾರೆ.

‘ರಜನಿಕಾಂತ್ ಅವರ ಜೊತೆ ಕೈ ಜೋಡಿಸುವುದೆಂದರೆ ಒಂದು ಸಿನಿಮಾಕ್ಕೆ ತಾರಾಗಣ ಆಯ್ಕೆ ಮಾಡಿದಂತೆ ಅಲ್ಲ. ನಾವಿಬ್ಬರೂ ಸಂಪೂರ್ಣ ಭಿನ್ನ ವಿಚಾರಗಳನ್ನು ಹೊಂದಿದ್ದೇವೆ’‍ ಎಂದು ಕಮಲ್ ಅವರು ಬರೆದಿದ್ದಾರೆ. ಇದೇ 21ರಂದು ಅವರು ತಮ್ಮ ರಾಜಕೀಯ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ ಮತ್ತು ರಾಜಕೀಯ ಪ್ರವಾಸ ಕೈಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry