ಭಾನುವಾರ, ಜೂನ್ 7, 2020
29 °C

ಅಖಿಲ ಭಾರತ ವಿವಿ ಬಾಲ್‍ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲ ಭಾರತ ವಿವಿ ಬಾಲ್‍ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್

ಮಂಗಳೂರು: ಆಂಧ್ರಪ್ರದೇಶದ ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ ವಿವಿ ಮಹಿಳಾ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನಲ್ಲಿ ಮಂಗಳೂರು ವಿವಿ 4ನೇ ಬಾರಿ ಚಾಂಪಿಯನ್ ಆಗಿದೆ.

ಕ್ವಾರ್ಟರ್ ಫೈನಲ್‍ನಲ್ಲಿ ಮಂಗಳೂರು ವಿವಿ ತಂಡವು ಮದುರೈ ಕಾಮರಾಜ್ ವಿವಿ ತಂಡದ ವಿರುದ್ಧ 35-16, 35-16 ಸೇಟ್‌ಗಳ ಅಂತರದಿಂದ ಸೋಲಿಸಿ ಅಖಿಲ ಭಾರತ ವಿವಿ ಚಾಂಪಿಯನ್‍ಷಿಪ್‍ನ ಲೀಗ್‍ ಹಂತಕ್ಕೆ ಅರ್ಹತೆ ಪಡೆಯಿತು.

ಲೀಗ್ ಹಂತದ ಪಂದ್ಯಗಳಲ್ಲಿ ಮಂಗಳೂರು ವಿವಿ ತಂಡವು ತಮಿಳುನಾಡಿನ ಎಸ್‌ಆರ್‌ಎಂ ವಿವಿ ತಂಡದ ವಿರುದ್ಧ 35-31, 35-28 ಅಂತರದಲ್ಲಿ ಗೆಲುವು ಸಾಧಿಸಿತು.

2ನೇ ಲೀಗ್ ಪಂದ್ಯದಲ್ಲಿ ಮದ್ರಾಸ್ ವಿವಿ ವಿರುದ್ಧ 35-24, 35-20 ಅಂಕಗಳ ಜಯ ಸಾಧಿಸಿತು.

ಅಂತಿಮ ಹಂತದ ಲೀಗ್ ಪಂದ್ಯದಲ್ಲಿ ಮಂಗಳೂರು ವಿವಿ ತಂಡವು  ಚೆನ್ನೈನ ಬಿಎಸ್‌ಎಆರ್‌ ವಿವಿ ತಂಡದ ವಿರುದ್ಧ 35-28, 35-17 ನೇರ್‌ ಸೆಟ್‌ಗಳ ಅಂತರದ ಗೆಲುವು ಸಾಧಿಸಿತು.

ರಾಷ್ಟ್ರದ ಸುಮಾರು 74 ವಿವಿ ತಂಡಗಳು ಈ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿದ್ದು, ಮಂಗಳೂರು ವಿ.ವಿ. ತಂಡದ ನೇತೃತ್ವವನ್ನು ಸ್ಟಾರ್ ಆಫ್ ಇಂಡಿಯಾ ಆಟಗಾರ್ತಿ ಜಯಲಕ್ಷ್ಮೀ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.