ಸೇವಾ ವಿವರ ನೀಡದ ಭಾರತ: ಪಾಕ್‌ ಟೀಕೆ

7

ಸೇವಾ ವಿವರ ನೀಡದ ಭಾರತ: ಪಾಕ್‌ ಟೀಕೆ

Published:
Updated:
ಸೇವಾ ವಿವರ ನೀಡದ ಭಾರತ: ಪಾಕ್‌ ಟೀಕೆ

ಇಸ್ಲಾಮಾಬಾದ್‌: ಬೇಹುಗಾರಿಕೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ಪಾಸ್‌ಪೋರ್ಟ್‌ ಹಾಗೂ ಸೇವಾ ವಿವರಗಳನ್ನು ನೀಡುವಂತೆ ಸೂಚಿಸಿದ್ದರೂ ಭಾರತ ಪ್ರತಿಕ್ರಿಯಿಸಿಲ್ಲ ಎಂದು ಪಾಕಿಸ್ತಾನ ಆರೋಪಿಸಿದೆ.

‘ಕುಲಭೂಷಣ್‌ ಜಾಧವ್‌ ಅವರು ಭಾರತೀಯ ನೌಕಾಪಡೆಯಿಂದ ನಿವೃತ್ತರಾಗಿರುವ ಬಗ್ಗೆ ಮತ್ತು ಹುಸೇನ್‌ ಮುಬಾಕರ್‌ ಪಟೇಲ್‌ ಎನ್ನುವವರ ಪಾಸ್‌ಪೋರ್ಟ್‌ ಅನ್ನು ಹೇಗೆ ಹೊಂದಿದ್ದರು ಎನ್ನುವ ವಿವರಗಳನ್ನು ನೀಡುವಂತೆ ಕೋರಲಾಗಿತ್ತು’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಡಾ. ಮೊಹಮ್ಮದ್‌ ಫೈಸಲ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry