ಮಂಗಳವಾರ, ಡಿಸೆಂಬರ್ 10, 2019
20 °C

ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು

Published:
Updated:
ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು

1. ಧರೆಯ ‘ಅತ್ಯಂತ ದೀರ್ಘ ಪರ್ವತ ಪಂಕ್ತಿ’ಯಾಗಿರುವ ಆಂಡಿಸ್‌ನ ಒಂದು ದೃಶ್ಯ ಚಿತ್ರ-1ರಲ್ಲಿದೆ. ಆಂಡಿಸ್ ಪರ್ವತ ಪಂಕ್ತಿಯ ಉದ್ದ ಇವುಗಳಲ್ಲಿ ಯಾವುದಕ್ಕೆ ಅತ್ಯಂತ ಸಮೀಪ?

ಅ. 1,800 ಕಿಲೋ ಮೀಟರ್

ಬ. 3,500 ಕಿಲೋ ಮೀಟರ್

ಕ. 5,400 ಕಿಲೋ ಮೀಟರ್

ಡ. 7,200 ಕಿಲೋ ಮೀಟರ್

ಇ. 9,500 ಕಿಲೋ ಮೀಟರ್

2. ಮಂಗಳ ಗ್ರಹದ ಅಧ್ಯಯನಕ್ಕೆಂದು ಕಳುಹಿಸಲಾಗಿರುವ ವ್ಯೋಮ ನೌಕೆಗಳಲ್ಲೊಂದು ಚಿತ್ರ-2ರಲ್ಲಿದೆ. ಮಂಗಳ ನೌಕೆಗಳ ಈ ಪಟ್ಟಿಯಲ್ಲಿ ನಮ್ಮ ದೇಶ ಕಳುಹಿಸಿದ ವ್ಯೋಮ ನೌಕೆ ಯಾವುದು?

ಅ. ಮಾರ್ಸ್ ಎಕ್ಸ್‌ಪ್ರೆಸ್

ಬ. ಮಾವೆನ್

ಕ. ಮಾರ್ಸ್ ಆರ್ಬಿಟರ್ ಮಿಷನ್ 

ಡ. ಮಾರ್ಸ್ ಗ್ಲೋಬಲ್ ಸರ್ವೇಯರ್

ಇ. ಮಾರ್ಸ್ ಓಡೆಸ್ಸಿ

3. ಉಭಯ ವಾಸಿ ಪ್ರಾಣಿಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದ ಕಪ್ಪೆಗಳ ಒಂದು ಪ್ರಭೇದ ಚಿತ್ರ-3ರಲ್ಲಿದೆ. ಕಪ್ಪೆಗಳಲ್ಲಿ ಸುಮಾರು ಎಷ್ಟು ಪ್ರಭೇದಗಳಿವೆ ಗೊತ್ತೇ?

ಅ. 2,500

ಬ. 3,100

ಕ. 4,300

ಡ. 6,500

4. ಹುಲ್ಲು ಬಯಲುಗಳ ನಿವಾಸಿಯಾದ, ಅತ್ಯಂತ ಪರಿಚಿತವಾದ ಒಂದು ಹಕ್ಕಿ ಚಿತ್ರ-4ರಲ್ಲಿದೆ. ಈ ಹಕ್ಕಿ ಯಾವುದೆಂದು ಗುರುತಿಸಬಲ್ಲಿರಾ?

ಅ. ಬಸ್ಟರ್ಡ್

ಬ. ಪೆಲಿಕನ್

ಕ. ಮರಕುಟುಕ

ಡ. ಐಬೀಸು

ಇ. ಈಗ್ರೆಟ್

5. ಚಿಗರೆ (ಜಿಂಕೆ) ವರ್ಗಕ್ಕೆ ಸೇರಿದ, ಅತ್ಯಂತ ವೇಗದ ಓಟಗಾರ ಕೂಡ ಆದ ಪ್ರಸಿದ್ಧ ಪ್ರಾಣಿ ‘ಗೆಜೆಲ್’ ಚಿತ್ರ-5ರಲ್ಲಿದೆ. ಧರೆಯಲ್ಲಿ ಗೆಜೆಲ್‌ಗಳ ಪ್ರಧಾನ ನೈಸರ್ಗಿಕ ನೆಲೆ ಇವುಗಳಲ್ಲಿ ಯಾವುದು ಗೊತ್ತೇ?

ಅ. ದಕ್ಷಿಣ ಅಮೆರಿಕದ ವೃಷ್ಟಿ ವನ

ಬ. ಆಫ್ರಿಕದ ಹುಲ್ಲು ಬಯಲು

ಕ. ಆಸ್ಟ್ರೇಲಿಯದ ಮರುಭೂಮಿ

ಡ. ಆರ್ಕ್‌ಟಿಕ್‌ನ ತಂಡ್ರಾ ಪ್ರದೇಶ

6. ಬೆಳ್ಳನ್ನ ವರ್ಣದ, ಆಕರ್ಷಕ ಶಿರಾಲಂಕಾರವನ್ನೂ ಪಡೆದ, ಸುಂದರ ರೂಪದ, ಹಾರಲಾರದ ಹಕ್ಕಿಯೊಂದು ಚಿತ್ರ-6ರಲ್ಲಿದೆ. ಇಡೀ ಪೃಥ್ವಿಯಲ್ಲಿ ಒಂದೇ ಒಂದು ಪುಟ್ಟ ದ್ವೀಪ ‘ನ್ಯೂ ಕ್ಯಾಲಿಡೋನಿಯಾ’ಗೆ ಸೀಮಿತವಾದ ವಾಸ್ತವ್ಯ ಹೊಂದಿರುವ ಈ ಹಕ್ಕಿ ಯಾವುದು, ಗುರುತಿಸಬಲ್ಲಿರಾ?

ಅ. ಕಕಾಪೋ

ಬ. ಹೋಟ್ಜಿನ್

ಕ. ರೇಲ್

ಡ. ಕಾಗು

7. ವಾನರರ ವಿಧಗಳಲ್ಲೆಲ್ಲ ಸುಪರಿಚಿತವಾದ ‘ಚಿಂಪಾಂಜಿ’ ಚಿತ್ರ-7ರಲ್ಲಿದೆ. ಚಿಂಪಾಂಜಿಯ ವೈಜ್ಞಾನಿಕ ಹೆಸರು ಇವುಗಳಲ್ಲಿ ಯಾವುದು?

ಅ. ಹೈಲೋಬೇಟಸ್ ಎಜಿಲಿಸ್

ಬ. ಪಾನ್ ಪ್ಯಾನಿಸ್ಕಸ್

ಕ. ಪಾನ್ ಟ್ರೋಗ್ಲೋಡೈಟ್ಸ್

ಡ. ಪೋಂಗೋ ಅಬೆಲೈ

8. ಭೂ ನೆಲದಲ್ಲಿರುವ ಕಲ್ಲಿದ್ದಿಲಿನ ಪ್ರಧಾನ ನಿಕ್ಷೇಪಗಳನ್ನು ತೋರಿಸುತ್ತಿರುವ ಪ್ರಪಂಚ ಭೂಪಟ ಚಿತ್ರ-8ರಲ್ಲಿದೆ. ಕಲ್ಲಿದ್ದಿಲನ್ನು ಕುರಿತ ಈ ಪ್ರಶ್ನೆಗಳಿಗೆ ಸರಿಯುತ್ತರಗಳು ಗೊತ್ತೇ?

ಅ. ಕಲ್ಲಿದ್ದಿಲಿನ ನಿಕ್ಷೇಪಗಳು ಗರಿಷ್ಠ ಪ್ರಮಾಣದಲ್ಲಿರುವ ರಾಷ್ಟ್ರ ಯಾವುದು?

ಬ. ಕಲ್ಲಿದ್ದಿಲನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುತ್ತಿರುವ ದೇಶ ಯಾವುದು?

ಕ. ಕಲ್ಲಿದ್ದಿಲಿನ ಗರಿಷ್ಠ ಬಳಕೆ ಯಾವ ಉದ್ದೇಶಕ್ಕಾಗಿ ಆಗುತ್ತಿದೆ?

ಡ. ಕಲ್ಲಿದ್ದಿಲಿನ ಬಳಕೆಯಲ್ಲಿ ಜಗತ್ತಿನಲ್ಲಿ ನಮ್ಮ ರಾಷ್ಟ್ರ ಎಷ್ಟನೆಯ ಸ್ಥಾನದಲ್ಲಿದೆ?

9. ಧರೆಯ ನೈಸರ್ಗಿಕ ಸಂಪತ್ತುಗಳಲ್ಲೊಂದಾದ ‘ಖನಿಜ’ಗಳ ಎರಡು ವಿಧಗಳು ಚಿತ್ರ-9 ಮತ್ತು ಚಿತ್ರ-10ರಲ್ಲಿವೆ. ಖನಿಜಗಳ ಬಗೆಗಿನ ಈ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ? ಯೋಚಿಸಿ ತೀರ್ಮಾನಿಸಿ:

ಅ. ಖನಿಜಗಳಲ್ಲಿ ಸರಿಸುಮಾರು 4,000 ವಿಧಗಳಿವೆ.

ಬ. ಖನಿಜಗಳು ರಾಸಾಯನಿಕ ಸಂಯುಕ್ತ ವಸ್ತುಗಳಾಗಿವೆ.

ಕ. ಬಹುಪಾಲು ಎಲ್ಲ ಖನಿಜಗಳೂ ಸ್ಫಟಿಕ ರೂಪದಲ್ಲೇ ಲಭಿಸುತ್ತವೆ.

ಡ. ಕಲ್ಲಿದ್ದಿಲು ಖನಿಜಗಳ ಗುಂಪಿಗೇ ಸೇರಿದೆ.

ಇ. ಖನಿಜಗಳಿಂದಲೇ ಶಿಲೆಗಳೂ ರೂಪುಗೊಂಡಿವೆ.

10. ಕೃತಕ ಉಪಗ್ರಹದಂತೆ ಭೂಮಿಯನ್ನು ಪರಿಭ್ರಮಿಸುತ್ತ, ಪ್ರಸ್ತುತ ಕ್ರಿಯಾಶೀಲವಾಗಿರುವ ಒಂದು ವಿಶಿಷ್ಟ ‘ಅಂತರಿಕ್ಷ ದೂರದರ್ಶಕ’ ಚಿತ್ರ-11ರಲ್ಲಿದೆ. ಈ ವಿಶ್ವ ವಿಖ್ಯಾತ ನಿರ್ಮಿತಿ ಯಾವುದು?

ಅ. ಸ್ಪಿಟ್ಜರ್ ವ್ಯೋಮ ದೂರದರ್ಶಕ

ಬ. ಚಂದ್ರಾ ಎಕ್ಸ್-ರೇ ಅಬ್ಸರ್ವೇಟರಿ

ಕ. ಹಬಲ್ ಅಂತರಿಕ್ಷ ದೂರದರ್ಶಕ

ಡ. ಕೆಪ್ಲರ್ ಮಿಷನ್

11. ನಮ್ಮ ಸೂರ್ಯನಂತಹ ನಕ್ಷತ್ರವೊಂದರ ಬದುಕಿನ ಅಂತ್ಯದ ವಿದ್ಯಮಾನ ಸೃಜಿಸಿರುವ ಅಂತರಿಕ್ಷ ದೃಶ್ಯ ಚಿತ್ರ-12 ರಲ್ಲಿದೆ.

ಅ. ಹೀಗೆ ಮೈದಳೆವ ನಿರ್ಮಿತಿಯ ಹೆಸರೇನು?

ಬ. ಈ ನಿರ್ಮಿತಿಯ ಕೇಂದ್ರ ಭಾಗದಲ್ಲಿ ಬೆಳ್ಳನೆ ಬೆಳಗುತ್ತಿರುವ ಪುಟ್ಟ ಗಾತ್ರದ ಮೂಲ ನಕ್ಷತ್ರ ಅವಶೇಷಕ್ಕೆ ಏನು ಹೆಸರು?

12. ನೈಸರ್ಗಿಕ ನೆಲೆಯ ಕುದುರೆ ಜೋಡಿಯೊಂದು ಚಿತ್ರ-13ರಲ್ಲಿದೆ. ಕುದುರೆಗಳು ‘ಈಕ್ವಿಡ್ಸ್’ ಕುಟುಂಬಕ್ಕೆ ಸೇರಿವೆ. ಇದೇ ಕುಟುಂಬಕ್ಕೆ ಸೇರಿ ಕುದುರೆಗಳ ನಿಕಟ ಸಂಬಂಧಿಗಳಾಗಿರುವ ಪ್ರಾಣಿಗಳು ಈ ಪಟ್ಟಿಯಲ್ಲಿ ಯಾವುವು?

ಅ. ಕತ್ತೆ

ಬ. ಟೇಪರ್

ಕ. ನೀರು ಕುದುರೆ

ಡ. ಜೀಬ್ರಾ

ಇ. ಹೇಸರಗತ್ತೆ

ಈ. ಕಡಲ ಕುದುರೆ

ಉ. ಒಕಾಪಿ

13. ಚಿತ್ರ-14ರಲ್ಲಿರುವ ‘ಕೀಟ’ವನ್ನು ಎಚ್ಚರಿಕೆಯಿಂದ ಗಮನಿಸಿ. ಈ ಕೀಟ ಯಾವುದು ಗುರುತಿಸಬಲ್ಲಿರಾ?

ಅ. ಪತಂಗ

ಬ. ಪಾತರಗಿತ್ತಿ

ಕ. ಬಿಳಿ ನೊಣ

ಡ. ದುಂಬಿ

ಉತ್ತರಗಳು:

1. ಡ. 7,200 ಕಿಲೋ ಮೀಟರ್

2. ಕ.  ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳ್ ಯಾನ್)

3. ಡ. 6,500 ಪ್ರಭೇದಗಳು

4. ಅ. ಬಸ್ಟರ್ಡ್

5. ಬ. ಆಫ್ರಿಕಾದ ಹುಲ್ಲು ಬಯಲು

6. ಡ. ಕಾಗು

7. ಕ. ಪಾನ್ ಟ್ರೋಗ್ಲೊಡೈಟ್ಸ್

8. ಅ. ಯು.ಎಸ್.ಎ;  ಬ. ಚೀನಾ;  ಕ. ವಿದ್ಯುತ್ ಉತ್ಪಾದನೆ;  ಡ. ತೃತೀಯ ಸ್ಥಾನ

9. ‘ಡ’ ಬಿಟ್ಟು ಇನ್ನೆಲ್ಲವೂ ಸರಿ

10. ಬ. ಚಂದ್ರಾ ಎಕ್ಸ್-ರೇ ಅಬ್ಸರ್ವೇಟರಿ

11. ಅ. ಗ್ರಹೀಯ ನೀಹಾರಿಕೆ; ಬ. ಶ್ವೇತ ಕುಬ್ಜ

12. ಕತ್ತೆ, ಜೀಬ್ರಾ ಮತ್ತು ಹೇಸರಗತ್ತೆ

13. ಅ. ಪತಂಗ

ಪ್ರತಿಕ್ರಿಯಿಸಿ (+)