ಭಾನುವಾರ, ಡಿಸೆಂಬರ್ 8, 2019
24 °C
ರಾಜಕೀಯ ಬಿಕ್ಕಟ್ಟಿನಿಂದ ಕಂಗೆಟ್ಟ ಜನತೆ

ನನ್ನ ಜನ್ಮ ಭೂಮಿ ತಮಿಳುನಾಡು ಸುಭಿಕ್ಷವಾಗಿಲ್ಲ : ಕಮಲ್ ಹಾಸನ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನನ್ನ ಜನ್ಮ ಭೂಮಿ ತಮಿಳುನಾಡು ಸುಭಿಕ್ಷವಾಗಿಲ್ಲ : ಕಮಲ್ ಹಾಸನ್

ಕೇಂಬ್ರಿಡ್ಜ್/ಇಂಗ್ಲೆಂಡ್: ನನ್ನ ಜನ್ಮ ಭೂಮಿ ತಮಿಳುನಾಡು ಸುಭಿಕ್ಷವಾಗಿಲ್ಲ. ಆದ ಕಾರಣ ಅಲ್ಲಿನ ಪ್ರತಿಯೊಂದು ಜಿಲ್ಲೆಯ ಗ್ರಾಮಗಳನ್ನು ದತ್ತು ಪಡೆಯುವುದಾಗಿ ನಟ ಕಮಲ್ ಹಾಸನ್ ಅವರು ಭಾನುವಾರ ಘೋಷಿಸಿದ್ದಾರೆ. 

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾರತೀಯ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ ಕಮಲ್ ಅವರು, ಇತ್ತೀಚೆಗೆ ರಾಜ್ಯದಲ್ಲಿ ಎದುರಾದ ರಾಜಕೀಯ ಬಿಕ್ಕಟ್ಟಿನಿಂದಾಗಿ ನನ್ನ ರಾಜ್ಯ ಕಂಗೆಟ್ಟಿದೆ. ಹಾಗಾಗಿ ದತ್ತು ಪಡೆದ ಗ್ರಾಮಗಳನ್ನು ಜಾಗತಿಕ ಮಟ್ಟದಲ್ಲಿ ಸುಭಿಕ್ಷ ಗ್ರಾಮವಾಗಿ ರೂಪಿಸುವ ಉದ್ದೇಶವಿದೆ ಎಂದು ಹೇಳಿದರು.

ಇದೇ ವೇಳೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ naalainamadhe.maiam.com ವೆಬ್‌ಸೈಟ್  ಉದ್ಘಾಟಿಸಿದ ಕಮಲ್ ಅವರು ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಧ್ಯೇಯದಂತೆ ದತ್ತು ಗ್ರಾಮಗಳಲ್ಲಿ ಸ್ವಾವಲಂ‌ಬಿತನ ಹಾಗೂ ಸ್ವ–ಸುಸ್ಥಿರ ಅಭಿವೃದ್ಧಿಯನ್ನು ಕಾಣುವಂತೆ ಶ್ರಮಿಸಲಿದ್ದೇನೆ ಎಂದು ಭರವಸೆ ನೀಡಿದರು.

ಮುಂದಿನ ರಾಜಕೀಯ ನಡೆಯಲ್ಲಿ ನಟ ರಜನಿಕಾಂತ್ ಜತೆ ಕೈ ಜೋಡಿಸಲಿದ್ದೀರಾ ಎಂದು ಎದುರಾದ ಪ್ರಶ್ನೆಗೆ ಕಮಲ್ ಅವರು, ನನ್ನ ರಾಜಕೀಯ ಪಯಣ ಎಂದಿಗೂ ಕೇಸರಿಮಯವಾಗದು. ಆದರೆ ರಜನಿ ಅವರ ರಾಜಕೀಯ ಯಾನ ಕೇಸರಿಮಯವಾಗಿದೆ. ಅಕಸ್ಮಾತ್ ಅದು ಬದಲಾವಣೆಯಾಗದಿದ್ದಲ್ಲಿ ಅವರ ಜತೆ ಮೈತ್ರಿ ಸಾಧ್ಯವಿಲ್ಲ ಎಂದು ನೇರವಾಗಿಯೇ ನುಡಿದಿದ್ದಾರೆ.

ನಾವಿಬ್ಬರು ಒಳ್ಳೆಯ ಗೆಳೆಯರು. ಆದರೆ ರಾಜಕೀಯ ಎನ್ನುವುದು ಇದಕ್ಕಿಂತ ವಿಭಿನ್ನ. ಹಾಗಾಗಿ ನಮ್ಮಿಬ್ಬರ ಆಲೋಚನೆ ಮತ್ತು ಯೋಜನೆ, ಪ್ರಣಾಳಿಕೆಗಳಲ್ಲಿ ಸಾಮಾನ್ಯ ಅಂಶ ಕಂಡು ಬಂದಲ್ಲಿ ಮೈತ್ರಿ ನಡೆಯುವ ಸಾಧ್ಯತೆ ಇರಬಹುದು ಎಂದು ಉತ್ತರಿಸಿದರು. 

ಪ್ರತಿಕ್ರಿಯಿಸಿ (+)