ಮಂಗಳವಾರ, ಮೇ 26, 2020
27 °C

‘ಒಡಿಯನ್‌’ಗೆ ಸಿಕ್ತು ಬಿಡುಗಡೆ ದಿನಾಂಕ

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

‘ಒಡಿಯನ್‌’ಗೆ ಸಿಕ್ತು ಬಿಡುಗಡೆ ದಿನಾಂಕ

ಅಕ್ಟೋಬರ್ 18. ಈ ದಿನಕ್ಕಾಗಿ ಖ್ಯಾತನಟ ಮೋಹನ್ ಲಾಲ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ಅಂದು ಮೋಹನ್ ಲಾಲ್ ಅಭಿನಯದ ‘ಒಡಿಯನ್’ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮಾಣಿಕ್ಯನ್ ಎನ್ನುವ ವಿಶಿಷ್ಟ ಪಾತ್ರದಲ್ಲಿ ಲಾಲ್ ಅಭಿನಯಿಸಿದ್ದು, ಈಗಾಗಲೇ ಟ್ರೇಲರ್ ನೋಡಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ವಿ.ಎ.ಶಿರಿಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡದ ನಟ ಪ್ರಕಾಶ್ ರೈ ಹಾಗೂ ಮಲಯಾಳಿ ಸುಂದರಿ ಮಂಜು ವಾರಿಯರ್ ಕೂಡಾ ಇದ್ದಾರೆ. ಈ ಚಿತ್ರಕ್ಕಾಗಿ ಮೋಹನ್ ಲಾಲ್ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಮೂರು ಭಿನ್ನ ಛಾಯೆಗಳಲ್ಲಿ ಕಾಣಿಸಿಕೊಂಡಿರುವ ಮೋಹನ್ ಲಾಲ್, ಯುವಕನ ಪಾತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದರು.

ಎಲೆ ಅಡಿಕೆ ಜಗಿಯುತ್ತಾ, ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತ ‘ಒಡಿಯನ್’ ಚಿತ್ರದ ಪೋಸ್ಟರ್‌ಗಳು ಈಗಾಗಲೇ ಎಲ್ಲೆಡೆ ಹರಿದಾಡುತ್ತಿದ್ದು, ಲಾಲ್ ಅಭಿಮಾನಿಗಳು ಚಿತ್ರದ ಬಿಡುಗಡೆ ದಿನಾಂಕ ಪ್ರಕಟಣೆಗಾಗಿ ಕಾಯುತ್ತಿದ್ದರು. ಅಂತೂ ‘ಒಡಿಯನ್’ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗುವುದು ನಿಕ್ಕಿಯಾಗಿದೆ. → v

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.