ಗುವಾಹಟಿ: ಸರೂಸಜಾಯಿ ಕ್ರೀಡಾಂಗಣದಲ್ಲಿ ಟೇಕ್ವಾಂಡೋ ಟ್ಯಾಲೆಂಟ್ ಐಡೆಂಟಿಫಿಕೇಶನ್ ಹಾಗೂ ಮಾಸ್ಟರ್ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸಲು ಅಸ್ಸಾಂ ಸರ್ಕಾರ ಸಜ್ಜಾಗಿದೆ.

ಅಸ್ಸಾಂ ಸರ್ಕಾರದ ಕ್ರೀಡೆ ಮತ್ತು ಯುವ ಕಲ್ಯಾಣ ನಿರ್ದೇಶನಾಲಯ ಹಾಗೂ ಇನ್ಸ್ಪೈರ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (ಐಐಎಸ್) ಸಹಯೋಗದಲ್ಲಿ, 2026ರ ಜನವರಿ 17ರಿಂದ 23ರವರೆಗೆ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.

ಅಸ್ಸಾಂ ಹಾಗೂ ಉತ್ತರ–ಪೂರ್ವ ಪ್ರದೇಶದ ಟೇಕ್ವಾಂಡೋ ಪ್ರತಿಭೆಗಳನ್ನು ಗುರುತಿಸಿ ಅವರನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳತ್ತ ಕರೆದೊಯ್ಯುವ ವ್ಯವಸ್ಥಿತ ಮಾರ್ಗ ರೂಪಿಸುವುದು ಇದರ ಉದ್ದೇಶವಾಗಿದೆ.

ಕ್ರೀಡೆ ಮತ್ತು ಯುವ ಕಲ್ಯಾಣ ಸಚಿವೆ ನಂದಿತಾ ಗೋರ್ಲೊಸ ಅವರು, 'ಈ ತರಬೇತಿಯು ಕ್ರೀಡಾಪಟುಗಳಿಗೆ ಅಗತ್ಯವಾದ ಜ್ಞಾನ, ತರಬೇತಿ ಮತ್ತು ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಸ್ಸಾಂ ಮಾತ್ರವಲ್ಲದೆ ದೇಶದ ಕ್ರೀಡಾ ಭವಿಷ್ಯವನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ' ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಆಯೋಜನೆಗೊಳ್ಳುತ್ತಿರುವ ಈ ತರಬೇತಿ ಕಾರ್ಯಕ್ರಮಕ್ಕೆ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜೇಡ್ ಜೋನ್ಸ್, ವಿಶ್ವ ಹಾಗೂ ಯುರೋಪಿಯನ್ ಚಾಂಪಿಯನ್ ಅಚಾಬ್ ಜೌವಾಡ್ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ರೂಪಿಸಲಾಗಿದೆ. ಮೊದಲಿಗೆ ಟ್ಯಾಲೆಂಟ್ ಐಡೆಂಟಿಫಿಕೇಶನ್ ಹಂತವು ಜನವರಿ 17, 18ರಂದು ನಡೆಯಲಿದೆ. ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ತಾಂತ್ರಿಕ ಅಭಿವೃದ್ಧಿ, ತಂತ್ರಾತ್ಮಕ ಅರಿವು, ದೈಹಿಕ–ಸ್ಪರ್ಧಾತ್ಮಕ ಸಿದ್ಧತೆ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಗಂಭೀರ ತರಬೇತಿ ನೀಡುವ ಎರಡನೇ ಹಂತವು ಉಳಿದ ಐದು ದಿನಗಳ ನಡೆಯಲಿದೆ.

ಈ ಕಾರ್ಯಕ್ರಮವು ಐಐಎಸ್ ಟೇಕ್ವಾಂಡೋದ ‘ಫೈಟಿಂಗ್ ಚಾನ್ಸ್’ ಪ್ರತಿಭಾ ಶೋಧನಾ ಯೋಜನೆಯ ಭಾಗವಾಗಿದ್ದು, ಹೈ-ಪರ್ಫಾರ್ಮೆನ್ಸ್ ನಿರ್ದೇಶಕ ಗ್ಯಾರಿ ಹಾಲ್ ಅವರ ನಾಯಕತ್ವದಲ್ಲಿ ಆರಂಭಿಸಲಾಗಿದೆ. ಈ ಯೋಜನೆಯ ಉದ್ದೇಶ ಮಹಿಳಾ ಮಾರ್ಷಲ್ ಆರ್ಟ್ಸ್ ಕ್ರೀಡಾಪಟುಗಳನ್ನು ಗುರುತಿಸಿ, ಅವರನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಸಜ್ಜಾಗಿಸುವುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.