ಭಾನುವಾರ, ಜೂನ್ 7, 2020
30 °C

ಇವಳು ಇವಳಲ್ಲ ಕಣಣ್ಣೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವಳು ಇವಳಲ್ಲ ಕಣಣ್ಣೋ

ದಪ್ಪನೆಯ ತುಟಿಯನ್ನು ಇನ್ನಷ್ಟು ಮಾದಕವಾಗಿಸಿರುವ ಕೆಂಪನೆಯ ಲಿಪ್‌ಸ್ಟಿಕ್‌, ಸೆಳೆಯುವ ಕಣ್ಣು, ಹುಬ್ಬುಗಳನ್ನೂ ಮುಚ್ಚಿಕೊಂಡಿರುವ ‘ರಸ್ನಾ’ ಶೈಲಿಯ ಕೇಶಶೈಲಿ, ಇತರ ರೂಪದರ್ಶಿಯರ ಹೊಟ್ಟೆ ಉರಿಸುವಂತಹ ಭಾವ ಭಂಗಿ... ‘ಮಿಸ್‌ ವರ್ಚ್ಯುವಲ್ ಕಜಕ್‌ಸ್ತಾನ್‌’ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಆರಿನಾ ಅಲಿಯೇವಾ ಹೊರಹೊಮ್ಮಿದ ರೀತಿಯಿದು. ಅದರಲ್ಲೇನು ವಿಶೇಷ ಎನ್ನುತ್ತೀರಾ?

ಇತ್ತೀಚೆಗೆ ‘ಮಿಸ್‌ ವರ್ಚ್ಯುವಲ್ ಕಜಕ್‌ಸ್ತಾನ್‌’ ಸ್ಪರ್ಧೆಯಲ್ಲಿ ಗೆದ್ದ ಅರಿನಾ ಅಲಿಯೇವಾ ವಯಸ್ಸು 22. ಇದು ದಕ್ಷಿಣ ಕಜಕ್‌ಸ್ತಾನದ ರಾಜಧಾನಿ ಶಿಮ್‌ಕೆಂಟ್‌ನಲ್ಲಿ ಆನ್‌ಲೈನ್‌ನಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆ. ಅರಿನಾಗೆ ಬರೋಬ್ಬರಿ ಎರಡು ಸಾವಿರ ಮತಗಳೂ ಬಂದಿದ್ದವು. ಅರಿನಾ ಗೆಲ್ಲಲು ಇತರ ಎಲ್ಲಾ‌ ಅಂಶಗಳೊಂದಿಗೆ ಇದೂ ಸೇರಿಕೊಂಡಿತು. ಅರಿನಾ ಮುಡಿಗೆ ಕಿರೀಟಧಾರಣೆಯೂ ಆಯಿತು.

ಆದರೆ ಕೆಲವೇ ಕ್ಷಣಗಳಲ್ಲಿ ಆಕೆಯನ್ನು ಸ್ಪರ್ಧೆಯಿಂದ ಅಮಾನ್ಯಗೊಳಿಸಿ ಹೊರದಬ್ಬಲಾಯಿತು. ಮತ ಚಲಾಯಿಸಿದವರಿಗೂ ದಿಗ್ಭ್ರಮೆ! ಇಷ್ಟಕ್ಕೂ ಸ್ಪರ್ಧೆ ಆಯೋಜಕರ ಈ ತೀರ್ಮಾನಕ್ಕೆ ಕಾರಣವೇನು ಗೊತ್ತೇ?

ಆರಿನಾ ಅಲಿಯೇವಾ ಹೆಸರಿನಲ್ಲಿ ಸುಂದರಿಯರ ಸ್ಪರ್ಧಿಸಿದ್ದ ರೂಪದರ್ಶಿ ಒಬ್ಬ ಯುವಕನಾಗಿದ್ದ! ಇಲ್ಲಾಯ್‌ ಡ್ಯಾಗಿಲೇವ್‌ ಎಂಬ ಹೆಸರಿನ ಯುವಕ ಮಾಡಿದ ಕರಾಮತ್ತು ಇದು.

ಸ್ಪರ್ಧೆಯಲ್ಲಿ ಗೆದ್ದು ಮುಡಿಗೇರಿದ್ದ ಕಿರೀಟವನ್ನು ಕಳಕೊಂಡರೂ ಈ ಯುವಕ ಅವಮಾನಿತನಾಗಿರಲಿಲ್ಲ. ಯಾಕೆಂದರೆ ಅದು ಅವನು ನಿರೀಕ್ಷಿಸಿದಂತೆಯೇ ನಡೆದಿತ್ತು. ಸುಂದರ ಯುವತಿಯಾಗಿ ಕಾಣಿಸಿಕೊಳ್ಳುವುದು ಕಷ್ಟ ಎಂಬುದು ಹೆಣ್ಣು ಮಕ್ಕಳ ಭಾವನೆ. ನಾನು ಸ್ನೇಹಿತರೊಂದಿಗೆ ಈ ಕುರಿತು ವಾದ ಮಾಡಿದ್ದೆ. ‘ಒಬ್ಬ ಯುವಕನೂ ಹೆಣ್ಣಿನಂತೆ ಕಾಣಿಸಿಕೊಂಡು ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲಬಹುದು’ ಎಂದು ನಾನು ಹೇಳಿದ್ದೆ. ಆಗ ಅವರು ಅದನ್ನು ಸಾಬೀತುಪಡಿಸುವಂತೆ ಒತ್ತಡ ಹೇರಿದರು. ಅದಕ್ಕಾಗಿ ನಾನು ಸ್ಪರ್ಧಿಸಿದೆ’ ಎಂದು ಆತ ವಿವರಿಸಿದ್ದಾನೆ.

ಇಷ್ಟಕ್ಕೂ, ಹೆಣ್ಣಿನಂತೆ ಕಾಣಿಸಿಕೊಳ್ಳಲು, ಒಳ್ಳೆಯ ಕೇಶ ವಿನ್ಯಾಸಕ, ಪ್ರಸಾಧನ ಕಲಾವಿದ ಮತ್ತು ಛಾಯಾಗ್ರಾಹಕ ಇದ್ದರಾಯಿತು ಎಂದು ತನ್ನ ಕರಾಮತ್ತಿನ ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.