ಬುಧವಾರ, ಡಿಸೆಂಬರ್ 11, 2019
24 °C

ಹೆಂಡತಿಯ ಈ ‘ಪರಿ’ ನೋಡಿಲ್ಲ: ಕೊಹ್ಲಿ

Published:
Updated:
ಹೆಂಡತಿಯ  ಈ ‘ಪರಿ’ ನೋಡಿಲ್ಲ: ಕೊಹ್ಲಿ

ಮದುವೆಯಾದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ‘ಪರಿ’ ಬಗ್ಗೆ ನಟಿ ಅನುಷ್ಕಾ ಶರ್ಮಾ ಭಾರಿ ಉತ್ಸುಕರಾಗಿದ್ದರೆ, ಇತ್ತ ಆ ಸಿನಿಮಾದ ಟ್ರೇಲರ್ ನೋಡಿ ಕ್ರಿಕೆಟಿಗ ವಿರಾಟ್ ಕೊಹ್ಲಿ ‘ನನ್ ಹೆಂಡ್ತಿಯ ಈ ರೂಪವನ್ನು ಯಾವತ್ತೂ ನೋಡಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಹಾರರ್ ಸಿನಿಮಾವಾಗಿರುವ ‘ಪರಿ’ಯ ಟ್ರೇಲರ್ ಇದೀಗ ಬಿಡುಗಡೆಯಾಗಿದ್ದು, ಪತ್ನಿ ಅನುಷ್ಕಾ ಜತೆಯೇ ವಿರಾಟ್ ಈ ಟ್ರೇಲರ್ ನೋಡಿದ್ದಾರೆ. ತೆರೆ ಮೇಲೆ ದೆವ್ವವಾಗಿ ಕಾಣಿಸಿಕೊಂಡಿರುವ ಪತ್ನಿಯ ಪಾತ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿರಾಟ್, ಟ್ರೇಲರ್ ನೋಡಿದರೆ ಭಯವಾಗುತ್ತದೆ ಅಂತಲೂ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ‘ಸಿನಿಮಾವನ್ನು ಶೀಘ್ರದಲ್ಲೇ ತೆರೆ ಮೇಲೆ ನೋಡಬೇಕೆಂಬ ಆಸೆ ಮೂಡುತ್ತಿದೆ. ತಡೆಯಲು ಆಗುತ್ತಿಲ್ಲ’ ಎಂದೂ ಟ್ವೀಟ್ ಮಾಡಿದ್ದಾರೆ.

‘ಆ ಹುಡುಗಿ ಯಾವ ಕೆಲಸಕ್ಕೆ ಬಂದಿದ್ದಾಳೋ ಆ ಕೆಲಸವೇ ಕಳೆದುಹೋಗಿದೆ...’ ಎನ್ನುವ ಸಂಭಾಷಣೆಯೊಂದಿಗೆ ರಾತ್ರಿಯ ನೀರವ ಮೌನದೊಳಗೆ ಟ್ರೇಲರ್ ಆರಂಭವಾಗುತ್ತದೆ. ಆರಂಭದಲ್ಲೇ ಅನುಷ್ಕಾ ಮೇಲೆ ಮೈಮೇಲೆ ದೆವ್ವ ಬರುವ ಸನ್ನಿವೇಶಗಳು, ಅದನ್ನು ನಂಬದ ಗಂಡ ಆಕೆಯನ್ನು ಪ್ರೀತಿಸುವ, ಸಂತೈಸುವ ದೃಶ್ಯಗಳು ಚಿತ್ರದ ಭಿನ್ನತೆಯನ್ನು ತೋರಿಸುತ್ತವೆ. 1:34 ನಿಮಿಷದ ಟ್ರೇಲರ್ ಪ್ರೇಕ್ಷಕರ ಮನದಲ್ಲಿ ಭಯಾನಕ ಕತೆಯನ್ನು ಹುಟ್ಟುಹಾಕುತ್ತದೆ.

‘ಪರಿ’ ಸಿನಿಮಾ ಮಾರ್ಚ್ 2ರಂದು ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)