ಶುಕ್ರವಾರ, ಡಿಸೆಂಬರ್ 6, 2019
25 °C

ಫುಟ್‌ಬಾಲ್‌: ಬಿಎಫ್‌ಸಿಗೆ ಜಯ

Published:
Updated:
ಫುಟ್‌ಬಾಲ್‌: ಬಿಎಫ್‌ಸಿಗೆ ಜಯ

ಬೆಂಗಳೂರು: ಪರಾಗ್ ಶ್ರೀವಾಸ್ ಅವರ ಏಕೈಕ ಗೋಲಿನ ನೆರವಿನಿಂದ ಬಿಎಫ್‌ಸಿ ತಂಡ ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ವತಿಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್‌ ಪಂದ್ಯದಲ್ಲಿ ಗೆಲುವಿನ ಓಟ ಮುಂದುವರಿಸಿದೆ.

ಬೆಂಗಳೂರು ಎಫ್‌ಸಿ ತಂಡ 1–0 ಗೋಲಿನಿಂದ ಎಫ್‌ಸಿ ಡೆಕ್ಕನ್‌ಗೆ ಸೋಲುಣಿಸಿದೆ. ವಿಜಯೀ ತಂಡದ ಪರಾಗ್ ಶ್ರೀವಾಸ್‌ (65) ಏಕೈಕ ಗೋಲು ದಾಖಲಿಸಿ ಗೆಲುವಿನ ರೂವಾರಿ ಎನಿಸಿದರು.

ಮೊದಲ ಪಂದ್ಯದ ಸೋಲಿನ ಬಳಿಕ ಎಫ್‌ಸಿ ಡೆಕ್ಕನ್ ತಂಡ ಸಾಕಷ್ಟು ಸುಧಾರಿತ ಆಟ ಆಡಿದೆ. ಬೆಂಗಳೂರು ಎಫ್‌ಸಿಗೆ ತಕ್ಕ ಪೈಪೋಟಿ ನೀಡಿದ ತಂಡ ಕೊನೆಯ ಹಂತದವರೆಗೂ ಗೋಲು ಗಳಿಸುವ ಪ್ರಯತ್ನ ನಡೆಸಿತು. ಈ ತಂಡದ ರಕ್ಷಣಾ ವಿಭಾಗದ ಆಟಗಾರರು ಕೂಡ ಚುರುಕಿನಿಂದ ಆಡಿದರು. ಬಿಎಫ್‌ಸಿ ತಂಡ ಗೋಲಿನ ಮಳೆ ಸುರಿಸದಂತೆ ತಡೆಯುವಲ್ಲಿ ಅವರು ಯಶಸ್ವಿಯಾದರು.

‘ಎ’ ಡಿವಿಷನ್ ಪಂದ್ಯದಲ್ಲಿ ಇನ್‌ ಕಮ್‌ಟ್ಯಾಕ್ಸ್‌ 1–0 ಗೋಲಿ ನಿಂದ ಡಿವೈಇಎಸ್‌ ಎದುರು ಗೆದ್ದಿದೆ. ಕುಮಾರ್‌ 13ನೇ ನಿಮಿಷದಲ್ಲಿ ಇನ್‌ಕಮ್‌ಟ್ಯಾಕ್ಸ್‌ ತಂಡದ ಗೋಲು ದಾಖಲಿಸಿದರು.

ಸೋಮವಾರದ ಪಂದ್ಯದಲ್ಲಿ ರಾಯಲ್ಸ್‌ ಎಫ್‌ಸಿ ಮತ್ತು ಬಿಯುಎಫ್‌ಸಿ ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)