ವರ್ಣಭೇದ ಸಂದೇಶ ರವಾನೆ: ಯುಕೆಐಪಿ ನಾಯಕ ವಜಾ

7

ವರ್ಣಭೇದ ಸಂದೇಶ ರವಾನೆ: ಯುಕೆಐಪಿ ನಾಯಕ ವಜಾ

Published:
Updated:
ವರ್ಣಭೇದ ಸಂದೇಶ ರವಾನೆ: ಯುಕೆಐಪಿ ನಾಯಕ ವಜಾ

ಲಂಡನ್‌ (ಪಿಟಿಐ): ರಾಜಕುಮಾರ ಹ್ಯಾರಿ ಅವರ ಭಾವಿ ಪತ್ನಿ ಮೇಘನ್‌ ಮರ್ಕೆಲ್‌ ಅವರನ್ನು ಗುರಿಯಾಗಿಸಿ ತನ್ನ ಗೆಳತಿಯರಿಗೆ ಜನಾಂಗೀಯ ದ್ವೇಷದ ಸಂದೇಶ ರವಾನೆ ಮಾಡಿದ ಆರೋಪ ಎದುರಿಸುತ್ತಿರುವ ‘ಯುನೈಟೆಡ್‌ ಕಿಂಗ್‌ಡಂ ಇಂಡಿಪೆಂಡೆನ್ಸ್‌ ಪಾರ್ಟಿ’ಯ ನಾಯಕ ಹೆನ್ರಿ ಬೋಲ್ಟನ್‌ ಅವರನ್ನು ವಜಾಗೊಳಿಸಲಾಗಿದೆ.

ಪಕ್ಷದೊಳಗೆ ಒತ್ತಡವಿದ್ದರೂ ರಾಜೀನಾಮೆ ನೀಡಲು ಹೆನ್ರಿ ನಿರಾಕರಿಸಿದ್ದರು. ಈ ಕಾರಣದಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಶನಿವಾರ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಅವರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಶೇಕಡಾ 63 ಮತ ಲಭಿಸಿದೆ. 

29 ವರ್ಷದ ರೂಪದರ್ಶಿ ಜೊ ಮರ್ನೆ ಜೊತೆ ಸಂಬಂಧ ಹೊಂದಿರುವ ಮಾಜಿ ಸೇನಾ ಅಧಿಕಾರಿ ಹೆನ್ರಿ ಅವರು ಕಪ್ಪು ವರ್ಣದವರನ್ನು ಅವಮಾನ ಮಾಡುವ ರೀತಿಯಲ್ಲಿ ಗೆಳತಿಗೆ ಸಂದೇಶ ಕಳುಹಿಸಿದ್ದರು. ‘ರಾಜಕುಮಾರ ಹ್ಯಾರಿಯ ಗೆಳತಿ ಮರ್ಕೆಲ್‌ ಮಿಶ್ರ ಜನಾಂಗದವರು. ಇದು ರಾಜಮನೆತನದೊಳಗೆ ಕಪ್ಪು ವರ್ಣದವರ ಪ್ರವೇಶಕ್ಕೆ ದಾರಿ ಮಾಡಿದೆ’ ಎಂದು ಸಂದೇಶ ಕಳುಹಿಸಿದ್ದರು. ಆ ಸಂದೇಶ ಆಕೆಯ ಗೆಳತಿಯರ ನಡುವೆ ಹರಿದಾಡಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry