ಸೋಮವಾರ, ಡಿಸೆಂಬರ್ 9, 2019
17 °C
ಪ್ರವೇಗ ವಿಜ್ಞಾನ ಹಾಗೂ ಸಂಸ್ಕೃತಿ ಮೇಳ

‘ಪ್ರವೇಗ ಇನೋವೇಷನ್‌’: ಎಂವಿಜೆಸಿಇಗೆ ಮೊದಲ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರವೇಗ ಇನೋವೇಷನ್‌’: ಎಂವಿಜೆಸಿಇಗೆ ಮೊದಲ ಬಹುಮಾನ

ಬೆಂಗಳೂರು: ಶ್ರವಣ ದೋಷವುಳ್ಳ ಹಾಗೂ ಮಾತು ಬಾರದವರು ಸಂವಹಿಸಲು ಸಾಧ್ಯವಾಗುವ ಸಾಧನ ಅಭಿವೃದ್ಧಿಪಡಿಸಿದ ಎಂವಿಜೆಸಿಇ ವಿದ್ಯಾರ್ಥಿಗಳು ‘ಪ್ರವೇಗ ಇನೋವೇಷನ್‌ ಸಮಿಟ್’ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ಪದವಿ ವಿದ್ಯಾರ್ಥಿಗಳು ‘ಪ್ರವೇಗ ವಿಜ್ಞಾನ ಹಾಗೂ ಸಂಸ್ಕೃತಿ ಮೇಳ’ ಆಯೋಜಿಸಿದ್ದರು. ಇದರ ಭಾಗವಾಗಿ ನಡೆದ ವಿಜ್ಞಾನ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಾವು ಅನ್ವೇಷಿಸಿದ ವಿಜ್ಞಾನದ ನೂತನ ಮಾದರಿಗಳ ಕುರಿತು ಪ್ರಾತಿಕ್ಷಿಕೆ ನೀಡಿದ್ದರು.

ಸನ್ನೆಯನ್ನು ಗ್ರಹಿಸಿ, ಅಕ್ಷರ ರೂಪ ನೀಡುವ ಫ್ಲೆಕ್ಸ್‌ ಸೆನ್ಸಾರ್‌ ಅನ್ನು‌ ಅಂತಿಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ದೇವಂಶು ಜಾ, ಅಭಿಷೇಶ್‌ ನಂದ, ಮಹೊಮ್ಮದ್‌ ಹುಸೇನ್‌ ಅಭಿವೃದ್ಧಿ ಪಡಿಸಿದ್ದಾರೆ. ಈ ಸೆನ್ಸಾರ್‌ನ್ನು ಕೈಗವಸಿನಲ್ಲಿ ಅಳವಡಿಸಿದ್ದಾರೆ. ಅದನ್ನು ಧರಿಸುವವರು ಸನ್ನೆ ಮೂಲಕ ಹೇಳುವ ಮಾತನ್ನು ಈ ಸಾಧನದಲ್ಲಿ ಅಳವಡಿಸಿರುವ ಎಲ್‌ಇಡಿ ಅಕ್ಷರ ರೂಪದಲ್ಲಿ ತೋರಿಸುತ್ತದೆ.

‘ಸನ್ನೆ ಭಾಷೆಯನ್ನು ಅರಿಯದ ಜಗತ್ತಿನಲ್ಲಿ ಅವರು ನಿರಾತಂಕವಾಗಿ ಸಂಹಿಸಬೇಕು ಎನ್ನುವ ಉದ್ದೇಶದಿಂದ ಈ ಸಾಧನ ಅಭಿವೃದ್ಧಿಪಡಿಸಲು ಅಣಿಯಾದೆವು. ಇದರಿಂದ ಅನೇಕರಿಗೆ ಉಪಯೋಗವಾದರೆ, ಅದೇ ನಮಗೆ ಬಹುಮಾನ’ ಎಂದು ವಿದ್ಯಾರ್ಥಿಗಳು ತಿಳಿಸಿದರು. ಬಹುಮಾನವು ₹1 ಲಕ್ಷ ನಗದನ್ನು ಹೊಂದಿದೆ.

ಪ್ರತಿಕ್ರಿಯಿಸಿ (+)