ಶುಕ್ರವಾರ, ಡಿಸೆಂಬರ್ 6, 2019
25 °C

ಜಗ್ಗೇಶ್‌ ನಿಮಗೊಂದು ದೊಡ್ಡ ನಮಸ್ಕಾರ: ಪ್ರಕಾಶ್‌ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗ್ಗೇಶ್‌ ನಿಮಗೊಂದು ದೊಡ್ಡ ನಮಸ್ಕಾರ: ಪ್ರಕಾಶ್‌ ರೈ

ಬೆಂಗಳೂರು: ಜಗ್ಗೇಶ್‌ ಟ್ವೀಟ್‌ಗಳಲ್ಲಿ ಬಳಸಿರುವ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಪ್ರಕಾಶ್‌ ರೈ, 'ನೀವು ಪೂಜಿಸುವ ರಾಯರು ತಮ್ಮನ್ನು ನಿರ್ಧರಿಸಲಿ... ನಿಮಗೊಂದು ದೊಡ್ಡ  ನಮಸ್ಕಾರ’ ಎಂದಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿ ತೊಡೆತಟ್ಟಿದರೆ ಗಂಡಸುತನ ಎಂದಿದ್ದ ಜಗ್ಗೇಶ್‌ ಟ್ವೀಟ್‌ಗೆ ’ರಾಜಕೀಯ ಕಬಡ್ಡಿ ಆಟವಲ್ಲ...ನಿಮ್ಮ ಮನಸು, ಮಾತು ಸರಿಯಲ್ಲ’ ಎಂದು ಪ್ರಕಾಶ್‌ ರೈ ಉತ್ತರಿಸಿದ್ದರು. ಇದಕ್ಕೆ ಜಗ್ಗೇಶ್‌ ‘ನನ್ನಪ್ರಕಾರ ಗಂಡಸ್ಸುತನ ಪದಬಳಕೆ ರಾಜಕೀಯದಲ್ಲಿ ಹೋರಾಟ! ನನಗೆ ಗೊತ್ತಿರಲಿಲ್ಲಾ ನಿಮ್ಮ ಪ್ರಕಾರ ಗಂಡಸುತನ ಹೆಂಡತಿಯರಿಗೆ ಬಳಸುವುದು ಎಂದು!’  ಪ್ರತಿಕ್ರಿಯಿಸಿದ್ದರು.

ಸೈಡ್‌ ವಿಂಗ್‌ನ ನಕಲಿ ನಟ, ಕಾಂಗ್ರೆಸ್‌ ಪಕ್ಷದ ಮುಖವಾಡದ ಒಳಗಿನ ಅನುಯಾಯಿ ಎಂದೆಲ್ಲ ಟೀಕಿಸುವ ಜೊತೆಗೆ ‘ಜೀವನಪೂರ್ತಿ ತಮಿಳುಸೇವೆ ಮಾಡಿ ಇಳಿವಯಸ್ಸಿನಲ್ಲಿ ಕನ್ನಡಕ್ಕಾಗಿ ತಮ್ಮ ಸೇವೆ’ ಎಂದು ಜಗ್ಗೇಶ್‌ ವ್ಯಂಗ್ಯವಾಡಿದ್ದಾರೆ.

ಈ ಎಲ್ಲ ಟ್ವೀಟ್‌ಗಳ ಚಿತ್ರ ಪ್ರಕಟಿಸಿರುವ ಪ್ರಕಾಶ್‌ ರಾಜ್‌, ಚರ್ಚೆ ಏನಿದ್ದರೂ ಭಿನ್ನಾಭಿಪ್ರಾಯಗಳ ಕುರಿತಾಗಿರಬೇಕು. ಕೀಳು ಅಭಿರುಚಿಯ ಮಾತುಗಳು ಖಂಡನೀಯ ಹಾಗೂ ನೀವು ಪೂಜಿಸುವ ರಾಯರೇ ನಿಮ್ಮನ್ನು ನಿರ್ಧರಿಸಲಿ ಎಂದು ದೊಡ್ಡ ನಮಸ್ಕಾರ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)