ಶುಕ್ರವಾರ, ಡಿಸೆಂಬರ್ 6, 2019
24 °C

ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಹ್ಯಾರಿಸ್ ಪುತ್ರನ ಮೇಲೆ‌ ದೂರು ದಾಖಲಿಸಲು ವಿಳಂಬ: ಅಮಿತ್‌ ಶಾ ಆರೋಪ

Published:
Updated:
ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಹ್ಯಾರಿಸ್ ಪುತ್ರನ ಮೇಲೆ‌ ದೂರು ದಾಖಲಿಸಲು ವಿಳಂಬ: ಅಮಿತ್‌ ಶಾ ಆರೋಪ

ಮಂಗಳೂರು: ನಮ್ಮ ಕಾರ್ಯಕರ್ತರ ಮೇಲೆ ನಿರಂತರ ದಾಳಿ ಮಾಡಲಾಗುತ್ತಿದೆ. ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಶಾಸಕ ಹ್ಯಾರಿಸ್ ಪುತ್ರನ ಮೇಲೆ ಪ್ರಕರಣ ದಾಖಲಿಸಲು ವಿಳಂಬ ಮಾಡಲಾಯಿತು ಎಂದು ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ‌ ಆರೋಪಿಸಿದರು.

ಕೇವಲ‌ ಶಾಸಕನ ಪುತ್ರ ಎಂಬುದಕ್ಕೆ ಮಾತ್ರ ವಿಳಂಬ ಮಾಡಲಿಲ್ಲ. ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ವಿಳಂಬ ಮಾಡಲಾಯಿತು ಎಂದು ಅಮಿತ್ ಶಾ ಆರೋಪ ಮಾಡಿದರು.

ಉದ್ಯಮಿ ಲೋಕನಾಥ್ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್‌ ವಿರುದ್ಧ ದೂರು ದಾಖಲಿಸಿಕೊಳ್ಳುವಲ್ಲಿ ಆಗಿರುವ ವಿಳಂಬ ಕುರಿತು ಶಾ ಅವರು ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಆಪಾದಿಸಿದರು.

ಹಲ್ಲೆ ನಡೆಸಿ ಪರಾರಿಯಾಗಿದ್ದ ಮೊಹಮದ್ ನಲಪಾಡ್‌ ಸೋಮವಾರ ಪೊಲೀಸರಿಗೆ ಶರಣಾಗಿದ್ದು, ವಿಚಾರಣೆಗಾಗಿ ಇದೇ 21ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

* ಇವನ್ನೂ ಓದಿ...

ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಪ್ರತಿಕ್ರಿಯಿಸಿ (+)