ಶುಕ್ರವಾರ, ಡಿಸೆಂಬರ್ 6, 2019
23 °C

ಅನುಷ್ಕಾ ತಬ್ಬಿಕೊಂಡಿರುವ ಚಿತ್ರ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಕೊಹ್ಲಿ

Published:
Updated:
ಅನುಷ್ಕಾ ತಬ್ಬಿಕೊಂಡಿರುವ ಚಿತ್ರ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಕೊಹ್ಲಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಜತೆಗಿನ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.

ಅನುಷ್ಕಾ ತಮ್ಮನ್ನು ತಬ್ಬಿರುವ ಫೋಟೊವೊಂದನ್ನು ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿರುವ ಕೊಹ್ಲಿ ‘ಮೈ ಒನ್ ಆ್ಯಂಡ್ ಒನ್ಲಿ’ ಎಂಬ ಅಡಿಬರಹ ನೀಡಿದ್ದಾರೆ. ಗೋಡೆಯೊಂದರಲ್ಲಿ ಗಂಡು ಮತ್ತು ಹೆಣ್ಣು ತಬ್ಬಿಕೊಂಡಿರುವ ಚಿತ್ರವೊಂದರ ಮುಂದೆ ನಿಂತು ಈ ಫೋಟೊ ಸೆರೆಹಿಡಿಯಲಾಗಿದೆ.


 

My one and only!

A post shared by Virat Kohli (@virat.kohli) on


ಇನ್‌ಸ್ಟಾಗ್ರಾಂನಲ್ಲಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಫೋಟೊಗೆ 1.50 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್‌ ಒತ್ತಿದ್ದಾರೆ. 20 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ದಾಖಲಾಗಿವೆ.

ಸದ್ಯ ವಿರಾಟ್ ಕೊಹ್ಲಿ ದಕ್ಷಿಣಾ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮ ಯಶಸ್ಸಿಗೆ ಪತ್ನಿ ಅನುಷ್ಕಾ ಅವರೇ ಕಾರಣ ಎಂದು ಕೊಹ್ಲಿ ಹೇಳಿದ್ದರು. ವಿರಾಟ್ ಮತ್ತು ಅನುಷ್ಕಾ 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ವಿವಾಹವಾಗಿದ್ದಾರೆ.

ಪ್ರತಿಕ್ರಿಯಿಸಿ (+)