ಶುಕ್ರವಾರ, ಡಿಸೆಂಬರ್ 6, 2019
25 °C

ಫಾತಿಮಾ ಹುಬ್ಬಿಗೆ ಕತ್ತರಿ ಬಿದ್ದಿದ್ದೇಕೆ?

Published:
Updated:
ಫಾತಿಮಾ ಹುಬ್ಬಿಗೆ ಕತ್ತರಿ ಬಿದ್ದಿದ್ದೇಕೆ?

‘ಥಗ್ಸ್‌ ಆಫ್‌ ಹಿಂದುಸ್ತಾನ್‌’ ಚಿತ್ರದ ನಾಯಕಿ ಫಾತಿಮಾ ಸನಾ ಶೇಕ್‌, ಈ ಚಿತ್ರದ ಚಿತ್ರೀಕರಣ ಶುರುವಾದಾಗಿನಿಂದಲೂ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ, ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಬಲ ಹುಬ್ಬನ್ನು ಮಧ್ಯಭಾಗದಲ್ಲೇ ಶೇವ್‌ ಮಾಡಿಕೊಂಡಿರುವುದು ಎಲ್ಲರ ಚರ್ಚೆಯ ವಸ್ತುವಾಗಿದೆ.

ತಮಾಷೆ ಎಂದರೆ, ‘ಥಗ್ಸ್‌...’ ಚಿತ್ರದಲ್ಲಿ ಅಮೀರ್‌ಖಾನ್‌ ಮತ್ತು ಕತ್ರಿನಾ ಕೈಫ್‌ ನೇತೃತ್ವದ ತಂಡದೊಂದಿಗೆ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫಾತಿಮಾ, ತಮ್ಮ ಹುಬ್ಬನ್ನೇನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಬದಲಿಗೆ, ತಮ್ಮ ಪಾತ್ರ ಈ ವೇಷವನ್ನು ಬಯಸುತ್ತದೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

 

ಪ್ರತಿಕ್ರಿಯಿಸಿ (+)