ಬುಧವಾರ, ಡಿಸೆಂಬರ್ 11, 2019
16 °C

ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ಗೆ ಜಯ

Published:
Updated:
ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ಗೆ ಜಯ

ಬೆಂಗಳೂರು: ರೋಚಕ ಘಟ್ಟದಲ್ಲಿ ನಂದಕುಮಾರ್‌ ಬಾರಿಸಿದ ಗೋಲಿನ ನೆರವಿನಿಂದ ಆರ್‌ಡಬ್ಲ್ಯುಎಫ್‌ ತಂಡ ಬಿಡಿಎಫ್‌ಎ ವತಿಯ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.

ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೋರಾಟದಲ್ಲಿ ಆರ್‌ಡಬ್ಲ್ಯುಎಫ್‌ 2–2 ಗೋಲುಗಳಿಂದ ಎಎಸ್‌ಸಿ ಮತ್ತು ಸೆಂಟರ್‌ ತಂಡದ ವಿರುದ್ಧ ಡ್ರಾ ಮಾಡಿಕೊಂಡಿತು.

ಆರಂಭದಿಂದಲೇ ಚುರುಕಿನ ಆಟಕ್ಕೆ ಅಣಿಯಾದ ಆರ್‌ಡಬ್ಲ್ಯುಎಫ್‌ಗೆ 22ನೇ ನಿಮಿಷದಲ್ಲಿ ರಾಜೇಶ್‌ ಮುನ್ನಡೆ ತಂದುಕೊಟ್ಟರು. 41ನೇ ನಿಮಿಷದಲ್ಲಿ ಎಎಸ್‌ಸಿ ತಂಡದ ನೀರಜ್‌ ಸಿಂಗ್‌ ಚೆಂಡನ್ನು ಗುರಿ ಮುಟ್ಟಿಸಿ 1–1ರ ಸಮಬಲಕ್ಕೆ ಕಾರಣರಾದರು.

62ನೇ ನಿಮಿಷದಲ್ಲಿ ನೀರಜ್‌ ಮತ್ತೊಮ್ಮೆ ಮೋಡಿ ಮಾಡಿದರು. ಹೀಗಾಗಿ ಎಎಸ್‌ಸಿ 2–1ರ ಮುನ್ನಡೆ ಗಳಿಸಿತು. ಆದರೆ ಹೆಚ್ಚುವರಿ ಅವಧಿಯಲ್ಲಿ (90+1) ನಂದಕುಮಾರ್‌ ಚುರುಕಾಗಿ ಗೋಲು ಗಳಿಸಿ ಆರ್‌ಡಬ್ಲ್ಯುಎಫ್‌ ಪಾಳಯದಲ್ಲಿ ಖುಷಿ ಮೂಡಿಸಿದರು.

ಡ್ರಾ ಪಂದ್ಯದಲ್ಲಿ ಎಜಿಒಆರ್‌ಸಿ: ಎಜಿಒಆರ್‌ಸಿ ಎಫ್‌ಸಿ ಮತ್ತು ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ನಡುವಣ ‘ಎ’ ಡಿವಿಷನ್‌ ಲೀಗ್‌ ಪಂದ್ಯ ಕೂಡ ಡ್ರಾ ಆಯಿತು. ಎಜಿಒಆರ್‌ಸಿ ತಂಡದ ಮಂಜು (38 ಮತ್ತು 42ನೇ ನಿಮಿಷ) ಮಿಂಚಿದರು. ಯಂಗ್‌ ಚಾಲೆಂಜರ್ಸ್‌ ತಂಡದ ವೈರಮುತ್ತು (10ನೇ ನಿ.) ಮತ್ತು ವಿಮಲ್‌ (29ನೇ ನಿ.) ತಲಾ ಒಂದು ಗೋಲು ಗಳಿಸಿದರು.

ಪ್ರತಿಕ್ರಿಯಿಸಿ (+)