ದಿವ್ಯಾಗೆ ರಾಜ್ಯ ತಂಡದ ಸಾರಥ್ಯ

7

ದಿವ್ಯಾಗೆ ರಾಜ್ಯ ತಂಡದ ಸಾರಥ್ಯ

Published:
Updated:

ಬೆಂಗಳೂರು: ದಿವ್ಯಾ ಜ್ಞಾನಾನಂದ ಅವರು ದಕ್ಷಿಣ ವಲಯ 23 ವರ್ಷದೊಳಗಿನವರ ಅಂತರ ರಾಜ್ಯ ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಫೆಬ್ರುವರಿ 23ರಿಂದ ಮಾರ್ಚ್‌ 1ರವರೆಗೆ ಹೈದರಾಬಾದ್‌ನಲ್ಲಿ ಟೂರ್ನಿ ನಡೆಯಲಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ತಂಡ ಇಂತಿದೆ: ದಿವ್ಯಾ ಜ್ಞಾನಾನಂದ (ನಾಯಕಿ), ಸಿ.ಪ್ರತ್ಯೂಷಾ (ಉಪ ನಾಯಕಿ), ಸಂಜನಾ ಭಾಟ್ನಿ (ವಿಕೆಟ್‌ ಕೀಪರ್‌), ರಾಮೇಶ್ವರಿ ಗಾಯಕವಾಡ, ದೇವಸ್ಮಿತಾ ಬುಟ್ಟಾ, ಸಿಮ್ರನ್‌ ಹೆನ್ರಿ, ಸಹನಾ ಪವಾರ್‌, ಶ್ರೇಯಾಂಕ ಪಾಟೀಲ, ಅನಘಾ ಮುರಳಿ, ಪ್ರತ್ಯೂಷಾ ಕುಮಾರ್‌ (ವಿಕೆಟ್‌ ಕೀಪರ್‌), ಮೋನಿಕಾ ಪಟೇಲ್‌, ವೃಂದಾ ದಿನೇಶ್‌, ಅದಿತಿ ರಾಜೇಶ್‌, ಐಶ್ವರ್ಯ ಗಣೇಶ್‌ ಮತ್ತು ಎಂ.ಸೌಮ್ಯಾ.

ಕೋಚ್‌: ಮಾಲಾ ಸುಂದರೇಶನ್‌. ಸಹಾಯಕ ಕೋಚ್‌: ಲಕ್ಷ್ಮಿ ಹರಿಹರನ್‌. ಟ್ರೈನರ್‌: ಹಿತೈಶಿ ಬಸವರಾಜ್‌. ಫಿಸಿಯೊ: ಸಿಂಧು. ವಿಡಿಯೊ ವಿಶ್ಲೇಷಕಿ: ಮಾಲಾ ರಂಗಸ್ವಾಮಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry