ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ ಯುವ ಪ್ರಶಸ್ತಿ ಅಂತಿಮ ಹಂತಕ್ಕೆ ಇಬ್ಬರು ಭಾರತೀಯರ ಆಯ್ಕೆ

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಲಿಂಗ ಸಮಾನತೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇಬ್ಬರು ಭಾರತೀಯರು ಕಾಮನ್‌ವೆಲ್ತ್‌ ಯುವ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಅಂತಿಮ ಹಂತದಲ್ಲಿ 20 ಮಂದಿ ಇದ್ದಾರೆ.

ಸಮುದಾಯದಲ್ಲಿ ಹೊಸ ರೀತಿಯ ಯೋಜನೆಗಳನ್ನು ಕಾರ್ಯಗತಗೊಳಿಸಿ, ಮಹತ್ವದ ಬದಲಾವಣೆಗೆ ಕಾರಣರಾದ ಯುವಜನತೆಯನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಕಾಮನ್‌ವೆಲ್ತ್ ಯುವ ಕಾರ್ಯಕ್ರಮದ 400 ಅಭ್ಯರ್ಥಿಗಳ ಪೈಕಿ ಇವರು ಆಯ್ಕೆಯಾಗಿದ್ದಾರೆ.

ದೆಹಲಿಯ ಹೈಯ್ಯ ಸಂಘಟನೆಯ ಹಿರಿಯ ಕಾರ್ಯತಂತ್ರ ತಜ್ಞೆ ಮೃಣಾಲಿನಿ ದಯಾಳ್ ಹಾಗೂ ಇವನ್ ಕಾರ್ಗೊ ಸಂಸ್ಥೆಯ ಸ್ಥಾಪಕ ಯೋಗೇಶ್ ಕುಮಾರ್ ಅವರು ಈ ಪಟ್ಟಿಯಲ್ಲಿದ್ದಾರೆ. ಪುರುಷ ಪ್ರಾಬಲ್ಯವಿರುವ ಕೊರಿಯರ್ ಸಂಸ್ಥೆಯಲ್ಲಿ ಮಹಿಳೆಯರಿಗೂ ಉದ್ಯೋಗ ನೀಡಿ ಸಮಾನತೆ ತರಲು ಯೋಗೇಶ್ ಶ್ರಮಿಸಿದ್ದನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT