ಬುಧವಾರ, ಡಿಸೆಂಬರ್ 11, 2019
24 °C

ಅತ್ತಿಗೆರೆ: ತಾಮ್ರ ಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ತಿಗೆರೆ: ತಾಮ್ರ ಶಾಸನ ಪತ್ತೆ

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗರಹಾರ ಸಮೀಪದ ಅತ್ತಿಗೆರೆಯಲ್ಲಿ 14ನೇ ಶತಮಾನದ ತಾಮ್ರ ಶಾಸನ ಪತ್ತೆಯಾಗಿದೆ ಎಂದು ಜಿಲ್ಲಾ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿ ಮೇಕನಗದ್ದೆ ಲಕ್ಷ್ಮಣಗೌಡ ತಿಳಿಸಿದ್ದಾರೆ.

ಗ್ರಾಮದ ದೇಗುಲ ಸಮಿತಿ ಅಧ್ಯಕ್ಷ ನಾಗೇಶಗೌಡ ನೆರವಿನೊಂದಿಗೆ ಶಾಸನದಲ್ಲಿ ಬರವಣಿಗೆಯ ನಕಲನ್ನು ಪಡೆದುಕೊಂಡು ಅದರ ಪಠ್ಯವನ್ನು ಸಂಗ್ರಹಿಸಲಾಗಿದೆ. ಮೈಸೂರಿನ ಶಾಸನ ತಜ್ಞ ಎಚ್.ಎಂ.ನಾಗರಾಜ ರಾವ್ ಅವರು ಪರಾಮರ್ಶಿಸಿ ಗದ್ಯಕ್ಕೆ ಅನುವಾದಿಸಿದ್ದಾರೆ.

ಸುಮಾರು ಒಂದು ಅಡಿ ಚೌಕಾಕಾರದಲ್ಲಿರುವ ಈ ತಾಮ್ರ ಶಾಸನದ ಎರಡೂ ಬದಿಯಲ್ಲಿ ಬರವಣಿಗೆ ಇದೆ. ಮುಂಭಾಗದಲ್ಲಿ 31ಸಾಲು, ಹಿಂಭಾಗದಲ್ಲಿ 30 ಸಾಲುಗಳಿವೆ. ಆರಂಭದಲ್ಲಿ ಶಿವ ಪಾರ್ವತಿ, ವೃಷಭ, ಸೂರ್ಯ ಇವೆ. ತೆಲುಗು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯುವುದು ಈ ಶಾಸನದ ವಿಶೇಷವಾಗಿದೆ. ಶಾಸನದಲ್ಲಿ ಈ ನಾಡಿನ ದೇವತೆಗಳು, ಪೌರಾಣಿಕ ರಾಜಮನೆತನ ಭಾರತದ ನದಿಗಳ ಉಲ್ಲೇಖ ಇದೆ. ಇದೊಂದು ಧರ್ಮಶಾಸನವಾಗಿದ್ದು ಕೊನೆಯಲ್ಲಿ ಶಾಪಾಶಯ ವಾಕ್ಯಗಳಿವೆ.

ಪ್ರತಿಕ್ರಿಯಿಸಿ (+)