7

ಜಗಜೀವನ್‌ ರಾಮ್‌ ಭವನಕ್ಕೆ ಶಂಕುಸ್ಥಾಪನೆ

Published:
Updated:

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯು ಮಾಗಡಿ ರಸ್ತೆಯ ಹೊರವರ್ತುಲ ಜಂಕ್ಷನ್‌ ಬಳಿ ಕೇಂದ್ರ ಪರಿಹಾರ ಸಮಿತಿಯ ಆವರಣದಲ್ಲಿ ನಿರ್ಮಿಸಲಿರುವ ‘ಬಾಬು ಜಗಜೀವನ್‌ ರಾಮ್‌ ಭವನ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಇದೇ 21) ಸಂಜೆ 4ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಜಯಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಅನಾವರಣ, ಮುನೇಶ್ವರ ಸ್ವಾಮಿ ಧ್ಯಾನಮಂದಿರ, ಸ್ವೀಕರಣಾ ಕೇಂದ್ರ ತರಬೇತಿ ಘಟಕ, ಕುರಿ– ಮೇಕೆ ಸಾಕಣೆ ಘಟಕ, ಅತಿಥಿಗೃಹ, ಸಿಬ್ಬಂದಿ ವಸತಿ ಗೃಹ, ರಂಗಮಂದಿರ, ಉದ್ಯಾನ ನಿರ್ಮಾಣ ಯೋಜನೆಗಳು ಉದ್ಘಾಟನೆಗೊಳ್ಳಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry