ಬುಧವಾರ, ಡಿಸೆಂಬರ್ 11, 2019
16 °C

ರಾಹುಲ್‌ ಗಾಂಧಿ ‘ಬಚ್ಚಾ’, ಬಿಜೆಪಿಗೆ 150 ಸ್ಥಾನ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಹುಲ್‌ ಗಾಂಧಿ ‘ಬಚ್ಚಾ’, ಬಿಜೆಪಿಗೆ 150 ಸ್ಥಾನ: ಯಡಿಯೂರಪ್ಪ

ಉಡುಪಿ: ರಾಜ್ಯ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ‘ಬಚ್ಚಾ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮೂದಲಿಸಿದ್ದಾರೆ.

‘ಕರ್ನಾಟಕದಲ್ಲಿ ಆ ಬಚ್ಚನನ್ನು ಕರೆತಂದು ಕಾಂಗ್ರೆಸ್‌ ಪ್ರಚಾರ ನಡೆಸಿದೆ’ ಎಂದು ಬುಧವಾರ ವ್ಯಂಗ್ಯವಾಡಿದ್ದಾರೆ. ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪುನರುಚ್ಚರಿಸಿದ್ದಾರೆ.

ಬಿಜೆಪಿ ಸಾಮಾಜಿಕ ಮಾಧ್ಯಮಗಳ ಸಭೆಯನ್ನು ಉದ್ದೇಶಿಸಿ ಯಡಿಯೂರಪ್ಪ ಮಾತನಾಡಿದರು.

ಬಡತನ ನಿರ್ಮೂಲನೆ ಬಗ್ಗೆ ಕಾಂಗ್ರೆಸ್‌ ನಿರಾಸಕ್ತಿ ತೋರುತ್ತಿದೆ ಎಂದೂ ಆರೋಪಿಸಿದ್ದರು. 'ದೇಶ ಸ್ವತಂತ್ರ್ಯಗೊಂಡು 70 ವರ್ಷ ಕಳೆದರೂ ಅನೇಕರು ಇನ್ನೂ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಇದು ಜನರ ಮೇಲೆ ಕಾಂಗ್ರೆಸ್‌ಗೆ ಇರುವ ಕಾಳಜಿಯನ್ನು ತೋರುತ್ತದೆ. ಈ ಮಾತು ಚುನಾವಣಾ ಪ್ರಚಾರಕ್ಕಾಗಿ ಅಲ್ಲ, ನಮಗೆ ನಿಜಕ್ಕೂ ಬಡ ಜನತೆಗೆ ಸಹಾಯ ಮಾಡುವ ಇಚ್ಛೆಯಿದೆ’ ಎಂದಿದ್ದರು.

ಸಾಮಾಜಿಕ ಮಾಧ್ಯಮಗಳು, ಪಕ್ಷಗಳ ಪ್ರಚಾರ ವೇದಿಕೆಗಳಲ್ಲಿ ಪಕ್ಷಗಳ ಆರೋಪ–ಪ್ರತ್ಯಾರೋಪಗಳು, ಮಾತಿನ ಚಕಮಕಿ ಮುಂದುವರಿದಿದೆ. ಏ‍ಪ್ರಿಲ್‌–ಮೇ ತಿಂಗಳು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಪ್ರತಿಕ್ರಿಯಿಸಿ (+)