ಶುಕ್ರವಾರ, ಡಿಸೆಂಬರ್ 13, 2019
27 °C

‘ಡೋಂಟ್ ಕೇರ್ ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಡೋಂಟ್ ಕೇರ್ ’

ನಟಿಮಣಿಯರಿಗೆ ಮೆಚ್ಚುಗೆಯ ಜೊತೆಗೆ ಚುಚ್ಚು ಮಾತುಗಳೂ ಮಾಮೂಲು. ಕೆಲವರಂತೂ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಟ್ರೋಲ್‌ ಆಗುತ್ತಲೇ ಇರುತ್ತಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ‘ವಿರೋಧಿಗಳು, ತೆಗಳಿಕೆಗಳ ಬಗೆಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರೆ ಇಷ್ಟು ವರ್ಷ ಸಿನಿಮಾ ಕ್ಷೇತ್ರದಲ್ಲಿ ನಾನು ಇರಲು ಸಾಧ್ಯವೇ ಆಗುತ್ತಿರಲಿಲ್ಲ ಇಂಥ ಸಣ್ಣಪುಟ್ಟ ವಿಷಯಗಳ ಬಗೆಗೆ ಸೂಕ್ಷ್ಮ ಮನಸ್ಥಿತಿ ಬೆಳೆಸಿಕೊಳ್ಳ ಬಾರದು’ ಎಂದಿದ್ದಾರೆ.

‘ಜನರ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ. ಆದರೆ ತಲೆ ಕೆಡಿಸಿಕೊಳ್ಳುವಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ. ನನಗಾಗಿ, ನನ್ನನ್ನು ಪ್ರೀತಿಸುವವರಿಗಾಗಿ ನಾನು ಬದುಕುತ್ತೇನೆ. ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಒಬ್ಬರಲ್ಲ ಇನ್ನೊಬ್ಬರಿಗೆ ಒಂದಲ್ಲ ಒಂದು ವಿಷಯದಲ್ಲಿ ಸಮಸ್ಯೆ ಆಗೇ ಆಗುತ್ತದೆ. ಹೀಗಾಗಿ ಇಂಥವುಗಳಿಗೆ ತಲೆ ಕೆಡಿಸಿಕೊಳ್ಳಲೇಬಾರದು. ಅಂತರ್ಜಾಲದಲ್ಲಿ ಬರುವ ಕಮೆಂಟ್‌ಗಳಿಗೆ, ಅದರಲ್ಲೂ ಗುರುತು ಮರೆಮಾಚುವವರ ಬಗ್ಗೆ ಎಂದೂ ಯೋಚಿಸಬಾರದು’ ಎಂದು ಪಿಗ್ಗಿ ಪ್ರತಿಕ್ರಿಯಿಸಿದ್ದಾರೆ⇒v

ಪ್ರತಿಕ್ರಿಯಿಸಿ (+)