ಬುಧವಾರ, ಡಿಸೆಂಬರ್ 11, 2019
15 °C

‘ತುಮ್ಹಾರಿ ಸುಲು’ ಆಗುವರೇ ಜ್ಯೋತಿಕಾ

Published:
Updated:
‘ತುಮ್ಹಾರಿ ಸುಲು’ ಆಗುವರೇ ಜ್ಯೋತಿಕಾ

ಅಭಿಮಾನಿಗಳಿಂದ ವಿದ್ಯಾಬಾಲನ್‌ಗೆ ‘ಸೂಪರ್‌ ವುಮೆನ್‌’ ಪಟ್ಟ ಗಿಟ್ಟಿಸಿಕೊಟ್ಟಿದ್ದ ‘ತುಮ್ಹಾರಿ ಸುಲು’ ತಮಿಳಿಗೆ ರಿಮೇಕ್‌ ಆಗುತ್ತಿದೆ. ವಿದ್ಯಾ ಮಾಡಿದ ಪಾತ್ರದಲ್ಲಿ ಜ್ಯೋತಿಕಾ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ರಾಧಾ ಮೋಹನ್‌ ‘ತುಮ್ಹಾರಿ ಸುಲು’ವನ್ನು ತೆಲುಗಿಗೆ ತರಲು ತಯಾರಿ ನಡೆಸುತ್ತಿದ್ದಾರೆ. ಇವರ ನಿರ್ದೇಶನದ ‘ಮೊಝಿ’ ಸಿನಿಮಾದಲ್ಲಿ ಹಿಂದೆ ಜ್ಯೋತಿಕಾ ನಡೆಸಿದ್ದರು. ನಿರ್ದೇಶಕರು ಜ್ಯೋತಿಕಾ ಬಳಿ ನಟಿಸುವಂತೆ ಕೇಳಿದ್ದಾರೆ ಆದರೆ ಅವರಿನ್ನು ಒಪ್ಪಿಗೆ ನೀಡಿಲ್ಲ. ಆರ್‌ಜೆ ಗೆಟಪ್‌ನಲ್ಲಿ ಜ್ಯೋತಿಕಾ ಅವರನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ದೊರಕುತ್ತದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯ ಇದು ಮಾತುಕತೆಯ ಹಂತದಲ್ಲಿದೆ ಎನ್ನಲಾಗಿದೆ.

ವಿವಾಹದ ನಂತರ ಏಳು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ಜ್ಯೋತಿಕಾ ‘ಹೌ ಓಲ್ಡ್‌ ಆರ್‌ ಯು’ ಸಿನಿಮಾದ ಮೂಲಕ ಪುನಃ ಮರುಪ್ರವೇಶ ಮಾಡಿದರು. ಈಗಲೂ ಬೇಡಿಕೆ ಉಳಿಸಿಕೊಂಡಿರುವ ಇವರು, ಒಂದರ ಮೇಲೊಂದರಂತೆ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

 

ಪ್ರತಿಕ್ರಿಯಿಸಿ (+)