ವೇತನ ಕೊಡಿಸಿ

7

ವೇತನ ಕೊಡಿಸಿ

Published:
Updated:

ಬೆಂಗಳೂರು ಶಿವಾಜಿನಗರದಲ್ಲಿರುವ ವಿ.ಕೆ.ಒ. ಸರ್ಕಾರಿ ಪ್ರೌಢಶಾಲೆಯ ಸಿಬ್ಬಂದಿಯಾಗಿರುವ ನಮಗೆ, 2017ರ ಸೆಪ್ಟೆಂಬರ್‌ ತಿಂಗಳಿನಿಂದ ವೇತನವನ್ನು ಕೊಟ್ಟಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಯಿಂದ, ಇಲಾಖೆಯ ಉಪನಿರ್ದೇಶಕರವರೆಗೆ ಎಲ್ಲರಿಗೂ ಈ ಬಗ್ಗೆ ದೂರು ನೀಡಿದ್ದೇವೆ. ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ.

ವೇತನವನ್ನು ಆಯಾ ತಿಂಗಳಿನಲ್ಲೇ ಪಾವತಿ ಮಾಡಬೇಕು ಎಂದು ಈ ಹಿಂದೆ ಹಲವು ಬಾರಿ ಆದೇಶಗಳಾಗಿದ್ದರೂ, ನಮ್ಮ ಮಟ್ಟಿಗೆ ಅವು ಜಾರಿಯಾಗಿಲ್ಲ. ಬೆಂಗಳೂರಿನಂಥ ನಗರದಲ್ಲಿ ವೇತನ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ‘ದಯಾಮರಣ ಕೊಡಿ’ ಎಂದು ಕೇಳುವುದೊಂದೇ ನಮಗೆ ಉಳಿದಿರುವ ದಾರಿಯಾಗಿದೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕು.

ಶಿಕ್ಷಕರು ಹಾಗೂ ಸಿಬ್ಬಂದಿ, ವಿ.ಕೆ.ಒ. ಸರ್ಕಾರಿ ಪ್ರೌಢಶಾಲೆ, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry