ಅಪ್‌ಸ್ಟಾಕ್ಸ್‌ ವಹಿವಾಟು ಹೆಚ್ಚಳ

7

ಅಪ್‌ಸ್ಟಾಕ್ಸ್‌ ವಹಿವಾಟು ಹೆಚ್ಚಳ

Published:
Updated:

ಬೆಂಗಳೂರು: "ಹೂಡಿಕೆದಾರರಿಗೆ ಅತ್ಯಲ್ಪ ಪ್ರಮಾಣದಲ್ಲಿ ಸೇವಾಶುಲ್ಕ ವಿಧಿಸುವ (ಡಿಸ್ಕೌಂಟ್ ಬ್ರೊಕರೇಜ್) ಷೇರು ದಲ್ಲಾಳಿ ಸಂಸ್ಥೆ ಅಪ್‌ಸ್ಟಾಕ್ಸ್‌ನ ವರಮಾನದಲ್ಲಿ ಶೇ 200ರಷ್ಟು ಹೆಚ್ಚಳವಾಗಿದೆ' ಎಂದು ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮತ್ತು ಸಹ ಸಂಸ್ಥಾಪಕ ಶ್ರೀನಿವಾಸ್ ವಿಶ್ವನಾಥ್ ತಿಳಿಸಿದರು.

‘ದೇಶದಲ್ಲಿ ಷೇರುಗಳ ಖರೀದಿ ಮತ್ತು ಮಾರಾಟಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡುವ ದಲ್ಲಾಳಿ ಉದ್ಯಮ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಸಾಂಪ್ರದಾಯಿಕ ದಲ್ಲಾಳಿ ಸಂಸ್ಥೆಗಳು, ದೊಡ್ಡ ಮಟ್ಟದ  ಕಂಪನಿಗಳು ಮತ್ತು ಬ್ಯಾಂಕ್‌ಗಳನ್ನೂ ಮೀರಿ ಡಿಸ್ಕೌಂಟ್ ಬ್ರೊಕರೇಜ್ ಸಂಸ್ಥೆಗಳು ಬೆಳೆಯುತ್ತಿವೆ ’ ಎಂದು ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಅಭಿಪ್ರಾಯಪಟ್ಟರು.

‘ಕಳೆದ ವರ್ಷ ಸಂಸ್ಥೆಯ ವಹಿವಾಟು ₹5,000  ಕೋಟಿಗಳಿಂದ ₹6,000 ಕೋಟಿಯಷ್ಟಿತ್ತು. ಈ ವರ್ಷ ₹14,000–₹18,000ಕೋಟಿಗೆ ಏರಿಕೆಯಾಗಿದೆ. ಗ್ರಾಹಕ ಸಂಖ್ಯೆ 25 ಸಾವಿರದಿಂದ 80 ಸಾವಿರಕ್ಕೆ ಹೆಚ್ಚಳವಾಗಿದೆ. ಮುಂದಿನ ವರ್ಷ ಶೇ 300ರಷ್ಟು ಪ್ರಗತಿ ಸಾಧಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಅವರು ಹೇಳಿದರು.

ದಲ್ಲಾಳಿ (ಬ್ರೋಕರೇಜ್‌) ಸಂಸ್ಥೆಗಳು ಷೇರುಗಳ ಖರೀದಿ ಮತ್ತು ಮಾರಾಟಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತವೆ. ಪೂರ್ಣಪ್ರಮಾಣದಲ್ಲಿ ವಹಿವಾಟು ನಡೆಸುವ ದಲ್ಲಾಳಿ ಸಂಸ್ಥೆಗಳಿಗಿಂತ ಅತ್ಯಲ್ಪ ದರದ ಸೇವಾ ಶುಲ್ಕ ವಿಧಿಸುವ ಮತ್ತು ಹೂಡಿಕೆದಾರರಿಗೆ ಸಲಹೆ ನೀಡದ ದಲ್ಲಾಳಿ ಸಂಸ್ಥೆಗಳನ್ನು ಡಿಸ್ಕೌಂಟ್‌ ಬ್ರೋಕರೇಜ್‌ (discount brokerage) ಎಂದು ಪರಿಗಣಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry