ಟೆಸ್ಟ್ ಕ್ರಿಕೆಟ್‌ಗೆ ಭವಿಷ್ಯದಲ್ಲಿ ಕುತ್ತು!

7

ಟೆಸ್ಟ್ ಕ್ರಿಕೆಟ್‌ಗೆ ಭವಿಷ್ಯದಲ್ಲಿ ಕುತ್ತು!

Published:
Updated:
ಟೆಸ್ಟ್ ಕ್ರಿಕೆಟ್‌ಗೆ ಭವಿಷ್ಯದಲ್ಲಿ ಕುತ್ತು!

ಬೆಂಗಳೂರು: ಮುಂದಿನ ಹತ್ತು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ರಾಷ್ಟ್ರಗಳ ಸಂಖ್ಯೆ ಕ್ಷೀಣಿಸಲಿವೆ ಎಂದು ಇಂಗ್ಲೆಂಡ್‌ನ ಹಿರಿಯ ಕ್ರಿಕೆಟ್ ಆಟಗಾರ ಕೆವಿನ್‌ ಪೀಟರ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

‘ಹತ್ತು ವರ್ಷಗಳಲ್ಲಿ ಭಾರತ, ಇಂಗ್ಲೆಂಡ್‌, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಾತ್ರ ಟೆಸ್ಟ್ ಆಡಲು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಉಳಿದ ರಾಷ್ಟ್ರಗಳು ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ಗೆ ಸೀಮಿತವಾಗಲಿವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಭವಿಷ್ಯದಲ್ಲಿ ಕ್ರಿಕೆಟ್‌ ಜಗತ್ತಿನಲ್ಲಿ ಭಾರಿ ಬದಲಾವಣೆ ಆಗಲಿದೆ’ ಎಂದು ಹೇಳಿರುವ ಅವರು, ‘ನ್ಯೂಜಿಲೆಂಡ್‌, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್‌ನಂಥ ಬಲಿಷ್ಠ ರಾಷ್ಟ್ರಗಳು ಕೂಡ ಟೆಸ್ಟ್‌ನಿಂದ ವಿಮುಖವಾಗಲಿವೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry