ಪಾಕ್‌ನಲ್ಲಿ ಮೊದಲ ಹಿಂದೂ ಸಂಸದೆ

7

ಪಾಕ್‌ನಲ್ಲಿ ಮೊದಲ ಹಿಂದೂ ಸಂಸದೆ

Published:
Updated:

ಲಾಹೋರ್‌ (ಪಿಟಿಐ): ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಕುಮಾರಿ ಕೊಲಿ ಅವರನ್ನು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಸಂಸತ್ತಿನ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಬುಧವಾರ ನಾಮನಿರ್ದೇಶಗೊಳಿಸಿದೆ ಎಂದು ಪಕ್ಷದ ವಕ್ತಾರರೊಬ್ಬರು ಹೇಳಿದ್ದಾರೆ.

ಸಿಂಧ್‌ ಪ್ರಾಂತ್ಯದ ಥಾರ್‌ ಪ್ರದೇಶಕ್ಕೆ ಸೇರಿದ 39 ವರ್ಷದ ಕೊಲಿ ಅವರ ನಾಮಪತ್ರವನ್ನು ಪಾಕಿಸ್ತಾನದ ಚುನಾವಣಾ ಆಯೋಗ ಅಂಗೀಕರಿಸಿದೆ. ಮಾರ್ಚ್‌ 3ರಂದು ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ

’ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದ ಸಂಸದರಾಗಿ ಆಯ್ಕೆಯಾಗುತ್ತಿರುವುದು ಇದೇ ಮೊದಲು. 2009ರಲ್ಲಿ ಡಾ. ಖತುಮಾಲ್‌ ಜೀವನ್‌ ಹಾಗೂ 2015ರಲ್ಲಿ ಗಯಾನ್‌ಚಾಂದ್‌ ಅವರನ್ನು ಸಂಸದರಾಗಿ ಪಿಪಿಪಿ ಆಯ್ಕೆ ಮಾಡಿತ್ತು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry