ಗುರುವಾರ , ಮೇ 28, 2020
27 °C

ಕಾಂಗ್ರೆಸ್ ಗೂಂಡಾಗಳಿಂದ 'ಕರ್ನಾಟಕ ರಕ್ಷಿಸಿ': ಬಿಜೆಪಿ ಟ್ವಿಟರ್‌ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಗೂಂಡಾಗಳಿಂದ 'ಕರ್ನಾಟಕ ರಕ್ಷಿಸಿ': ಬಿಜೆಪಿ ಟ್ವಿಟರ್‌ ಅಭಿಯಾನ

ಬೆಂಗಳೂರು: ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹಲ್ಲೆ ಪ್ರಕರಣ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ಬಿಜೆಪಿ 'ಕಾಂಗ್ರೆಸ್ ಗೂಂಡಾಗಳಿಂದ ಕರ್ನಾಟಕ ರಕ್ಷಿಸಿ' ಅಭಿಯಾನ ಪ್ರಾರಂಭಿಸಿದೆ.

ಶಾಸಕ ಹ್ಯಾರಿಸ್‌ರನ್ನು ತಕ್ಷಣವೇ ಸ್ಥಾನದಿಂದ ಅಮಾನತು ಮಾಡಬೇಕು, ಶಾಂತಿನಗರದ ಪಬ್, ಬಾರ್‌ಗಳಿಂದ ಹಫ್ತಾ ವಸೂಲು ಮಾಡಿಕೊಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ರಕ್ಷಿಸುತ್ತಿದ್ದೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಉತ್ತರಿಸುವಂತೆ ಬಿಜೆಪಿ ಐದು ಪ್ರಶ್ನೆಗಳನ್ನು ಟ್ವೀಟಿಸಿದೆ.

‘ಅಧಿಕಾರದ ಮದದಲ್ಲಿ ಮುಗ್ಧ ಜನರ ಮೇಲೆ ಗೂಂಡಾಗಿರಿ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಗೂಂಡಾಗಳಿಂದ ಕರ್ನಾಟಕ ರಕ್ಷಿಸಿ..’ ಎಂದು ಸಿಟಿ ರವಿ ಟ್ವೀಟ್‌ ಮಾಡಿದ್ದಾರೆ.

‘ಸಾಮಾನ್ಯ ಪ್ರಜೆ ಕರ್ನಾಟಕದಲ್ಲಿ ಭಯದಿಂದ ಜೀವಿಸುವ ಸ್ಥಿತಿ ಎದುರಾಗಿದೆ. ಕಾಂಗ್ರೆಸ್‌ ಗೂಂಡಾ ರಾಜ್ಯದಲ್ಲಿ ನಿಮ್ಮ ಜೀವದ ಸುರಕ್ಷತೆ ಬಗ್ಗೆ ಕಾತರಿ ಇಲ್ಲ’ ಎಂದು ಕೇಂದ್ರ ಸಚಿವ ಅನಂತ್ ಕುಮಾರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರಸ್ತುತ ಕರ್ನಾಟಕ ಉಳಿಸಿ ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಪ್ರಕಟಿಸುತ್ತಿರುವ ಬರಹಗಳಿಗೆ ಅನೇಕ ಟ್ವೀಟಿಗರಿಂದ ವಿರೋಧವೂ ವ್ಯಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.