ಕಮಲ್‌ಹಾಸನ್‌ ನಿರ್ಧಾರಕ್ಕೆ ರಜನಿಕಾಂತ್‌ ಮೆಚ್ಚುಗೆ

7

ಕಮಲ್‌ಹಾಸನ್‌ ನಿರ್ಧಾರಕ್ಕೆ ರಜನಿಕಾಂತ್‌ ಮೆಚ್ಚುಗೆ

Published:
Updated:
ಕಮಲ್‌ಹಾಸನ್‌ ನಿರ್ಧಾರಕ್ಕೆ ರಜನಿಕಾಂತ್‌ ಮೆಚ್ಚುಗೆ

ಚೆನ್ನೈ : ‘ಸಮಕಾಲೀನ ನಟ ಕಮಲ್‌ಹಾಸನ್‌ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವುದನ್ನು ನಟ ರಜನಿಕಾಂತ್‌ ಸ್ವಾಗತಿಸಿದ್ದಾರೆ. ಅವರೊಬ್ಬ ಸಮರ್ಥ ವ್ಯಕ್ತಿಯಾಗಿದ್ದು, ರಾಜಕೀಯದಲ್ಲಿ ಜನರ ವಿಶ್ವಾಸವನ್ನು ಸಂಪಾದಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟ ಕಮಲ್ ಹಾಸನ್ ತಮ್ಮ ರಾಜಕೀಯ ಪಕ್ಷ ‘ಮಕ್ಕಳ್ ನೀದಿ ಮಯ್ಯಂ’ ಗೆ ಮದುರೆನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದ್ದರು.

‘ನನ್ನ ಮತ್ತು ಅವರ ಮಾರ್ಗಗಳು ಬೇರೆ ಬೇರೆಯಾಗಿರಬಹುದು. ಜನರಿಗೆ ಒಳಿತು ಮಾಡುವುದೇ ಇಬ್ಬರ ಗುರಿಯಾಗಿದೆ’ ಎಂದರು.

‘ ಕಮಲ್‌ ಅವರು ಫೆ.21ರಂದು ಆಯೋಜಿಸಿದ್ದ ಸಾರ್ವಜನಿಕ ಸಭೆ ಅತ್ಯುತ್ತಮವಾಗಿತ್ತು. ಅವರ ರಾಜಕೀಯ ಯಾತ್ರೆಗೆ ನಾನು ಈಗಾಗಲೇ ಶುಭ ಹಾರೈಸಿದ್ದೇನೆ. ಮತ್ತೊಮ್ಮೆ ಅವರ ಪಕ್ಷಕ್ಕೆ ಶುಭವಾಗಲಿ’ ಎಂದರು.

ರಾಜಕೀಯ ಪಕ್ಷ ಸ್ಥಾಪನೆಗೂ ಮುನ್ನ ನಟ ರಜನಿಕಾಂರತ್‌, ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry