ಕೂಡ್ಲಿಗಿ: ಕಾಂಗ್ರೆಸ್‌ನಲ್ಲಿ 10 ಆಕಾಂಕ್ಷಿಗಳು

7

ಕೂಡ್ಲಿಗಿ: ಕಾಂಗ್ರೆಸ್‌ನಲ್ಲಿ 10 ಆಕಾಂಕ್ಷಿಗಳು

Published:
Updated:

ಕೂಡ್ಲಿಗಿ: ಈ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿ ಹತ್ತು ಮಂದಿ ಪಟ್ಟಣದ ಸಮುದಾಯ ಭವನದಲ್ಲಿ ಶುಕ್ರವಾರ ಚುನಾವಣೆ ವೀಕ್ಷಕ ಮಲ್ಲಿಕಾರ್ಜುನ ನಾಗಪ್ಪ ಮತ್ತು ಬಿ.ವಿ.ನಾಯಕ ಅವರಿಗೆ ಅರ್ಜಿ ಸಲ್ಲಿಸಿದರು.

ನರಸಿಂಹಗಿರಿ ವೆಂಕಟೇಶ್, ಜಿ. ನಾಗಮಣಿ, ಲೋಕೇಶ್ ನಾಯಕ, ಬಿ. ಭೀಮೇಶ್, ಕಾವಲ್ಲಿ ಶಿವಪ್ಪನಾಯಕ, ಜಯರಾಂ ನಾಯಕ, ಕೋಡಿಹಳ್ಳಿ ಭೀಮಪ್ಪ, ಗುಜ್ಜಲ ರಘು, ಸೋಮಪ್ಪ ನಾಯಕ ಮತ್ತು ಸೌಭಾಗ್ಯಮ್ಮ ಅರ್ಜಿ ಸಲ್ಲಿಸಿದವರು.

ತರಾತುರಿ ಸಭೆ: ಅರ್ಜಿ ಸ್ವೀಕಾರ ಸಭೆ ತರಾತುರಿಯಲ್ಲಿ ನಡೆಯಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದಾಗ ವೀಕ್ಷಕರು, ಮುಂದಿನ ಕ್ಷೇತ್ರಕ್ಕೆ ತೆರಳುವ ಆತುರದಲ್ಲಿದ್ದರು, ಹೀಗಾಗಿ ಯಾರಿಗೂ ಮಾತನಾಡಲು ಅವಕಾಶ ಕೊಡಲಿಲ್ಲ. ಅರ್ಜಿ ಸಲ್ಲಿಸಿದವರು ಬೆಂಬಲಿಗರೊಂದಿಗೆ ಕೂಡಲೇ ಹೊರ ಹೋಗಬೇಕು ಎಂಬ ಸೂಚನೆಯನ್ನೂ ನೀಡಲಾಗಿತ್ತು. ಕೇವಲ ಹತ್ತು ನಿಮಿಷದಲ್ಲಿ ಸಭೆ ಮುಕ್ತಾಯವಾಯಿತು.

ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ, ಪ್ರಚಾರ ಸಮಿತಿಯ ಅಧ್ಯಕ್ಷ ಸಿರಾಜ್ ಷೇಕ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷ ಗುಳಿಗಿ ವೀರೇಂದ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎನ್.ಎಂ.ನೂರ್ ಅಹಮದ್, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಸಿ.ಬಿ. ಜಯರಾಂ ನಾಯಕ, ಉದಯ ಜನ್ನು, ಎಂ. ಗುರುಸಿದ್ಧನಗೌಡ, ಕ್ಯಾರಿ ರಮೇಶ್, ಕೆ. ಈಶಪ್ಪ, ಕೊತ್ಲಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry