ಜೈಲಿಗೆ ಹೋಗೋಕೆ ಬಿಜೆಪಿ ಬರಬೇಕಾ?: ಮಲ್ಲಿಕಾರ್ಜುನ ಖರ್ಗೆ

7

ಜೈಲಿಗೆ ಹೋಗೋಕೆ ಬಿಜೆಪಿ ಬರಬೇಕಾ?: ಮಲ್ಲಿಕಾರ್ಜುನ ಖರ್ಗೆ

Published:
Updated:
ಜೈಲಿಗೆ ಹೋಗೋಕೆ ಬಿಜೆಪಿ ಬರಬೇಕಾ?: ಮಲ್ಲಿಕಾರ್ಜುನ ಖರ್ಗೆ

ಅಥಣಿ: ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಸಮಾವೇಶದಲ್ಲಿ ಸಂಸತ್ತಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕರ್ನಾಟಕದಲ್ಲಿ ಆದಂತಹ ಪ್ರಗತಿ ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಹೀಗಾಗಿ ಮಾತಾಡ್ತಾ ಇದ್ದಾರೆ ಎಂದರು.

‍ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಇಬ್ಬರದ್ದೂ ಮಾತನಾಡಿದ್ದೇ ಸಾಧನೆಯಾಗಿದೆ. 10 ಪರ್ಸೆಂಟ್‌ ಸರ್ಕಾರ ಅಂತಾರೆ. ಕೇಂದ್ರ ಸರ್ಕಾರ 99 ಪರ್ಸೆಂಟ್‌ ಸರ್ಕಾರ ಎಂದು ಟೀಕಿಸಿದರು.

ದೇಶದ ಜನರ ಹಣ ಸುರಕ್ಷಿತವಾಗಿಲ್ಲ. ಬೆವರು ಸುರಿಸಿ ಸಂಪಾದಿಸಿದ ಹಣಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಜೈಲಿಗೆ ಹೋಗೋಕೆ ಬಿಜೆಪಿ ಬರಬೇಕಾ? ಈ ಬಾರಿಯೂ ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕು ಎಂದು ಜನರು ನಿರ್ಧಾರ ಮಾಡಿಕೊಂಡಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry