ಅರುಣಾಚಲ ಪ್ರದೇಶ: ನಿಗೂಢ ವಸ್ತು ಪತ್ತೆ

7

ಅರುಣಾಚಲ ಪ್ರದೇಶ: ನಿಗೂಢ ವಸ್ತು ಪತ್ತೆ

Published:
Updated:

ಇಟಾನಗರ: ‘ಅರುಣಾಚಲ ಪ್ರದೇಶದ ಕಮ್ಲೆ ಜಿಲ್ಲೆಯಲ್ಲಿ ಭಾರತದ ಗಡಿ ಪ್ರದೇಶದ 100 ಕಿ.ಮೀ ಒಳಗೆ ಚೀನಿ ಭಾಷೆಯ ಬರಹಗಳಿದ್ದ ನಿಗೂಢ ವಸ್ತುವೊಂದು ಇಚೆಗೆ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಬಟ್ಟೆಯಂತಹ ವಸ್ತುವಿನಲ್ಲಿ ಸುತ್ತಿದ್ದ ಬಿಳಿ ಬಣ್ಣದ ಪೆಟ್ಟಿಗೆಯೊಂದು ಮರದಲ್ಲಿ ಸಿಲುಕಿಕೊಂಡಿರುವುದನ್ನು ರಿಪಾರಿ ಗ್ರಾಮದ ಜನರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೆಟ್ಟಿಗೆ ಭಾಗಶಃ ಸುಟ್ಟು ಹೋಗಿದ್ದು, ಅದರಲ್ಲಿ ಚೀನಿ ಭಾಷೆಯ ಬರಹಗಳಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾನ್‌ ಪಾಡಾ ತಿಳಿಸಿದ್ದಾರೆ.

‘ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪೆಟ್ಟಿಗೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಶೀಲನೆ ನಡೆಸಿದಾಗ ಪೆಟ್ಟಿಗೆಯೊಳಗೆ ಕಪ್ಪು ಬಣ್ಣದ ಸಾಧನವೊಂದು ಪತ್ತೆಯಾಗಿದೆ. ಹಾರಾಟಕ್ಕೆ ಅನುಕೂಲವಾಗುವಂತೆ ಅದಕ್ಕೆ ಬ್ಯಾಟರಿಗಳನ್ನೂ ಅಳವಡಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಇದು ಹವಾಮಾನ ಇಲಾಖೆ

ಯವರು ಬಳಸುವ ಸಾಧನವಾಗಿರುವ ಸಾಧ್ಯತೆ ಇದೆ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುವುದು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry