‘ನಂದನ್‌ ಸಮರ್ಥ ವ್ಯಕ್ತಿ’

7

‘ನಂದನ್‌ ಸಮರ್ಥ ವ್ಯಕ್ತಿ’

Published:
Updated:
‘ನಂದನ್‌ ಸಮರ್ಥ ವ್ಯಕ್ತಿ’

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿರುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ (ಎನ್‌ಎಚ್‌ಪಿಎಸ್‌) ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ರೂಪಿಸಲು ಇನ್ಫೊಸಿಸ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನಿಲೇಕಣಿ ಅವರ ಸ್ಥಾನದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಿಲ್ಲ ಎಂದು ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಮೋಹನದಾಸ್ ಪೈ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಈ ಆರೋಗ್ಯ  ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.   ಈ ಯೋಜನೆಗೆ ಸಮರ್ಪಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ರೂಪಿಸುವ ಅಗತ್ಯ ಇದೆ. ಅದನ್ನು ನಿಲೇಕಣಿ ಅವರು ಒದಗಿಸಲಿದ್ದಾರೆ.  ಈ ಯೋಜನೆಯ ಪರಿಕಲ್ಪನೆ, ವಿನ್ಯಾಸ ರೂಪಿಸಿ ಜಾರಿಗೆ ತರಲು ನೀಲೇಕಣಿ ಸಮರ್ಥ ವ್ಯಕ್ತಿಯಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ವಿಶ್ವದಲ್ಲೇ ಅತಿ ದೊಡ್ಡದಾದ ವೈಯಕ್ತಿಕ ಮಾಹಿತಿ ನಿರ್ವಹಣೆ ಮಾಡುವ ಆಧಾರ್‌ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿಲೇಕಣಿ ಅವರು ಜಿಎಸ್‌ಟಿಎನ್‌ ರಿಟರ್ನ್‌ ಸಲ್ಲಿಕೆ ಸರಳೀಕರಣ ಸಮಿತಿಯಲ್ಲೂ ಕೆಲಸ ಮಾಡಿದ್ದಾರೆ. ಆಧಾರ್ ಯೋಜನೆಯಂತೆಯೇಆರೋಗ್ಯ ರಕ್ಷಣಾ ಯೋಜನೆಗೂ ಮಾಹಿತಿ ತಂತ್ರಜ್ಞಾನದ ಬೃಹತ್ ವ್ಯವಸ್ಥೆ ಬೇಕಿದೆ. ಅದನ್ನು ನಿಲೇಕಣಿ ಅಭಿವೃದ್ಧಿಪಡಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry