₹1.28 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಅಭಿವೃದ್ಧಿ: ಪ್ರಮೋದ್ ಮಧ್ವರಾಜ್‌

7

₹1.28 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಅಭಿವೃದ್ಧಿ: ಪ್ರಮೋದ್ ಮಧ್ವರಾಜ್‌

Published:
Updated:

ಉಡುಪಿ: ಇಲ್ಲಿನ ತಾಲ್ಲೂಕು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರ ಅಭಿ ವೃದ್ಧಿಗಾಗಿ ಸರ್ಕಾರದಿಂದ ₹1.28 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕ ರಣ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

ಉಡುಪಿ ಜಿಲ್ಲಾ ಆಸ್ಪತ್ರೆಯ ಆವರ ಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಶವಾಗಾರ ಕಟ್ಟಡದ ಶಿಲಾ ನ್ಯಾಸ ನೆರವೇರಿಸಿ ಭಾನುವಾರ ಮಾತನಾ ಡಿದರು.

ಸುಮಾರು ₹ 85 ಲಕ್ಷ ವೆಚ್ಚದಲ್ಲಿ ನೂತನ ಸುಸಜ್ಜಿತ ಶವಾಗಾರ ನಿರ್ಮಾ ಣವಾಗಲಿದೆ. ಇಲ್ಲಿ 9 ಹಾಸಿಗೆಯ ಶೈತ್ಯ ಶವಾಗಾರ, ಮರಣೋತ್ತರ ಪರೀಕ್ಷೆಗೆ ಎರಡು ಪ್ರತ್ಯೇಕ ಕೊಠಡಿ, ಪೊಲೀಸರಿಗೆ ಮತ್ತು ವೈದ್ಯರಿಗೆ ಪ್ರತ್ಯೇಕ ಎರಡು ಕೊಠಡಿಗಳ ವ್ಯವಸ್ಥೆ, ಸಾರ್ವಜನಿಕರಿಗಾಗಿ ಹೊರಗಡೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.

ಮುಂದಿನ ನಾಲ್ಕು ತಿಂಗಳಲ್ಲಿ ಶವಾಗಾರದ ಕಾಮಗಾರಿ ಪೂರ್ಣಗೊಳ್ಳ ಲಿದೆ. ಜಿಲ್ಲಾಸ್ಪತ್ರೆಯಲ್ಲಿ ₹15 ಲಕ್ಷ ವೆಚ್ಚದಲ್ಲಿ ಕ್ಷಯ ರೋಗ ವಾರ್ಡ್ ಅಭಿವೃದ್ಧಿಪಡಿಸಲಾಗುತ್ತದೆ. ಅಲ್ಲದೆ, ಒಳಚರಂಡಿ ವ್ಯವಸ್ಥೆಯನ್ನು ಅಭಿ ವೃದ್ಧಿ ಪಡಿಸಲಾಗುತ್ತದೆ.

ಹಳೆಯ ಶವಾಗಾರದಲ್ಲಿ ವೈದ್ಯಕೀಯ ತ್ಯಾಜ್ಯ ಸಂಸ್ಕರಣೆಗೆ ಬಳಸಿಕೊಳ್ಳಲಾಗುತ್ತದೆ. ಸುಮಾರು ₹1.4 ಕೋಟಿ ವೆಚ್ಚ ದಲ್ಲಿ ನಿರ್ಮಾಣವಾಗುತ್ತಿರುವ ಆಯುಷ ಆಸ್ಪತ್ರೆ 10 ದಿನದಲ್ಲಿ ಉದ್ಘಾಟನೆ ಯಾಗಲಿದೆ ಎಂದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಇದ್ದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry