ವೈಟಿಪಿಎಸ್‌ ಲೋಕಾರ್ಪಣೆ ಇಂದು

7

ವೈಟಿಪಿಎಸ್‌ ಲೋಕಾರ್ಪಣೆ ಇಂದು

Published:
Updated:

ರಾಯಚೂರು: ಒಂದು ವರ್ಷದಿಂದ ವಿದ್ಯುತ್‌ ಉತ್ಪಾದಿಸುತ್ತಿರುವ ಯರಮರಸ್‌ ಸೂಪರ್‌ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌)ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ. 27 ರ ಮಂಗಳವಾರ ಲೋಕಾರ್ಪಣೆ ಮಾಡುವರು.

1,600 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಈ ಯೋಜನೆಗೆ 2012 ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದಕ್ಕಾಗಿ  ಒಟ್ಟು ₹1,324 ಕೋಟಿ ವೆಚ್ಚ ಮಾಡಲಾಗಿದೆ.

ವೈಟಿಪಿಎಸ್‌ಗೆ ಕಲ್ಲಿದ್ದಲು ಸಾಗಿಸುವುದಕ್ಕೆ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಸದ್ಯ ಆರ್‌ಟಿಪಿಎಸ್‌ನಿಂದ 6 ಕಿಲೊ ಮೀಟರ್‌ ದೂರದ ವೈಟಿಪಿಎಸ್‌ಗೆ ಲಾರಿಗಳ ಮೂಲಕ ಕಲ್ಲಿದ್ದಲು ಸಾಗಿಸಲಾಗುತ್ತಿದೆ. ಕಲ್ಲಿದ್ದಲು ಕೊರತೆ ಇರುವುದರಿಂದ ಎರಡರಲ್ಲಿ ಈಗ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry