ಗುಂಡಿನ ದಾಳಿ ಕುರಿತು ಚರ್ಚೆ

7
ಗವರ್ನರ್‌ಗಳ ವಾರ್ಷಿಕ ಸಭೆ: ಡೊನಾಲ್ಡ್‌ ಟ್ರಂಪ್ ಹೇಳಿಕೆ

ಗುಂಡಿನ ದಾಳಿ ಕುರಿತು ಚರ್ಚೆ

Published:
Updated:
ಗುಂಡಿನ ದಾಳಿ ಕುರಿತು ಚರ್ಚೆ

ವಾಷಿಂಗ್ಟನ್‌(ಎಪಿ): ಫ್ಲಾರಿಡಾದ ಹೈಸ್ಕೂಲ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಬಗ್ಗೆ ಚರ್ಚಿಸುವುದು  ಗವರ್ನರ್‌ಗಳ ವಾರ್ಷಿಕ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಶ್ವೇತಭವನದಲ್ಲಿ ಎಲ್ಲ ರಾಜ್ಯಗಳ ಗವರ್ನರ್‌ಗಳ ಸಭೆ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ಟ್ರಂಪ್, ‘ಫೆಬ್ರುವರಿ 14ರಂದು ಫ್ಲಾರಿಡಾದ ಶಾಲೆಯಲ್ಲಿ ನಡೆದ ದಾಳಿ ಬಗ್ಗೆ ಚರ್ಚಿಸಲಾಗುವುದು. ಪಿಸ್ತೂಲು ಬಳಸಲು ಈಗ ಇರುವ ಕನಿಷ್ಠ ವಯೋಮಿತಿ ಹೆಚ್ಚಳ, ಗನ್‌ ಖರೀದಿಯ ಹಿಂದಿನ ಕಾರಣ ಪತ್ತೆ ಹಚ್ಚುವುದು, ಮಾನಸಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವ ಬಗ್ಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದಿದ್ದಾರೆ’.

ಶಾಲೆಗಳಲ್ಲಿ ಗುಂಡಿನ ದಾಳಿ ಆಗುವುದನ್ನು ತಡೆಗಟ್ಟಲು ಮಸೂದೆಯೊಂದನ್ನು ರೂಪಿಸಲು, ಗವರ್ನರ್‌ಗಳಿಂದ ಸಲಹೆಗಳನ್ನು ಪಡೆಯಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಫೆಬ್ರುವರಿ 14ರಂದು ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ 17 ಮಂದಿ ಮೃತಪಟ್ಟಿದ್ದರು.

ಶಾಲೆಗೆ ಮರಳಿದ ವಿದ್ಯಾರ್ಥಿಗಳು: ಗುಂಡಿನ ದಾಳಿಯಲ್ಲಿ 17 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ನಂತರ ಮೊದಲ ಬಾರಿಗೆ ಸೋಮವಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಫ್ಲಾರಿಡಾದ ಶಾಲೆಗೆ ಬಂದರು. ಶಾಲೆಗಳಲ್ಲಿ ನಡೆಯುತ್ತಿರುವ ಗುಂಡಿನ ದಾಳಿ ತಡೆಗಟ್ಟಲು ತ್ವರಿತ ಕ್ರಮದ ಭರವಸೆ ದೊರೆತಿರುವುದರಿಂದ ಪರಸ್ಪರ ಹರ್ಷ ವ್ಯಕ್ತಪಡಿಸಿದರು.

ಭಾನುವಾರ ಪುನಶ್ಚೇತನ ಕಾರ್ಯಾಗಾರ ನಡೆದಿದ್ದು, ಶಿಕ್ಷಕರು ಹಾಗೂ ಸಿಬ್ಬಂದಿ ಸೋಮವಾರ ಶಾಲೆಗೆ ಬಂದರು. ಬುಧವಾರದಿಂದ ತರಗತಿಗಳು ಆರಂಭವಾಗಲಿವೆ. ಭಯ ಹೋಗಲಾಡಿಸಿ ಮೊದಲಿನ ವಾತಾವರಣ ಮೂಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ದಾಳಿ ಕುರಿತು ಮಾತನಾಡಿರುವ ಶಿಕ್ಷಕರೊಬ್ಬರು, ಶಾಲೆಗೆ ಮರಳಿದಾಗ ದಾಳಿಯ ಚಿತ್ರಣವೇ ಕಣ್ಮುಂದೆ ಬಂತು. ಮೇಜಿನ ಮೇಲೆ ನೋಟ್‌ ಪುಸ್ತಕಗಳು ಹಾಗೆಯೇ ಇದ್ದವು ಎಂದು ಹೇಳಿದ್ದಾರೆ.

**

ಶಾಲೆಗೆ ಮರಳಿದ ವಿದ್ಯಾರ್ಥಿಗಳು

ವಾಷಿಂಗ್ಟನ್‌ (ಎಎಫ್‌ಪಿ): ಗುಂಡಿನ ದಾಳಿಯಲ್ಲಿ 17 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ನಂತರ ಮೊದಲ ಬಾರಿಗೆ ಸೋಮವಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಫ್ಲಾರಿಡಾದ ಶಾಲೆಗೆ ಮರಳಿದರು. ಶಾಲೆಗಳಲ್ಲಿ ನಡೆಯುತ್ತಿರುವ ಗುಂಡಿನ ದಾಳಿ ತಡೆಗಟ್ಟಲು ತ್ವರಿತ ಕ್ರಮದ ಭರವಸೆ ದೊರೆತಿರುವುದರಿಂದ ಸಮಾಧಾನ ವ್ಯಕ್ತಪಡಿಸಿದರು.

ಆಶಿಸ್ತಿನ ಕಾರಣ ಉಚ್ಚಾಟನೆಗೊಂಡಿದ್ದ ವಿದ್ಯಾರ್ಥಿ ಫೆ.14ರಂದು ನಡೆಸಿದ ದಾಳಿಯಲ್ಲಿ 17 ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ಭಾನುವಾರ ಪುನಶ್ಚೇತನ ಕಾರ್ಯಾಗಾರ ನಡೆದಿದ್ದು, ಶಿಕ್ಷಕರು ಹಾಗೂ ಸಿಬ್ಬಂದಿ ಸೋಮವಾರ ಶಾಲೆಗೆ ಬಂದರು. ಬುಧವಾರದಿಂದ ತರಗತಿಗಳು ಆರಂಭವಾಗಲಿವೆ. ಹೆದರಿಕೆ ಹಾಗೂ ಭಯ ಹೋಗಲಾಡಿಸಿ ಮೊದಲಿನ ವಾತಾವರಣ ಮೂಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ದಾಳಿ ಕುರಿತು ಎನ್‌ಪಿಆರ್ ರೇಡಿಯೊದೊಂದಿಗೆ ಮಾತನಾಡಿರುವ ಶಿಕ್ಷಕರೊಬ್ಬರು, ಶಾಲೆಗೆ ಮರಳಿದಾಗ ದಾಳಿಯ ಚಿತ್ರಣ ಕಣ್ಮುಂದೆ ಬಂತು. ಮೇಜಿನ ಮೇಲೆ ನೋಟ್‌ ಪುಸ್ತಕಗಳು ಹಾಗೆಯೇ ಇದ್ದವು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry