ಪ್ರತ್ಯೇಕ ಅಪಘಾತ: ಎಂಟು ಮಂದಿ ಸಾವು

7

ಪ್ರತ್ಯೇಕ ಅಪಘಾತ: ಎಂಟು ಮಂದಿ ಸಾವು

Published:
Updated:

ವಿಜಯಪುರ/ ಕಾರವಾರ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಹಾಗೂ ಕಾರವಾರದ ಬಿಣಗಾ ಬಳಿ ಮಂಗಳವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ.

ಸೊಲ್ಲಾಪುರದ ಅಗಲೂರ ಗ್ರಾಮದ ಶೀತಲ್‌ ಹೋಟೆಲ್‌ ಸಮೀಪ ನಿಂತಿದ್ದ ಜೀಪ್‌ಗೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿದ್ದರಿಂದ ಜೀಪ್‌ನಲ್ಲಿದ್ದ ಐವರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಬಸವನಬಾಗೇವಾಡಿ ‍ಪಟ್ಟಣದ ಮೂವರು ಹಾಗೂ ಸೊಲ್ಲಾಪುರದ ಮೋಳ ತಾಲ್ಲೂಕಿನ ಇಬ್ಬರು ಸೇರಿದ್ದಾರೆ. ಗಾಯಗೊಂಡವರನ್ನು ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರವಾರ ಹೊರವಲಯದ ಬಿಣಗಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ, ಲಾರಿಯೊಂದು ಬೈಕ್‌ಗೆ ಡಿಕ್ಕಿಯಾಗಿ ಎರಡು ವರ್ಷದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಸೀಬರ್ಡ್‌ ನೌಕಾನೆಲೆಯಲ್ಲಿ ಉದ್ಯೋಗದಲ್ಲಿದ್ದ, ಉತ್ತರ ಪ್ರದೇಶದ ಕಾನ್ಪುರದ ಅಮಿತ್ ಕೌಶಲ್ (31), ಜ್ಯೋತಿ ಗುಪ್ತಾ (25) ಹಾಗೂ ಅವರ ಮಗು ಮೃತಪಟ್ಟವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry