ಬುಧವಾರ ಇಂಡೀಡ್ ಎಕ್ಸ್‌ಪ್ಲೋರ್ ಕಾರ್ಯಕ್ರಮ

7

ಬುಧವಾರ ಇಂಡೀಡ್ ಎಕ್ಸ್‌ಪ್ಲೋರ್ ಕಾರ್ಯಕ್ರಮ

Published:
Updated:

ಬೆಂಗಳೂರು: ಉದ್ಯೋಗ ಅವಕಾಶಗಳ ಮಾಹಿತಿ ನೀಡುವ ಅಂತರ್ಜಾಲ ತಾಣ ಇಂಡೀಡ್, ಬುಧವಾರ (ಫೆ. 28) ಬೆಂಗಳೂರಿನಲ್ಲಿ ‘ಇಂಡೀಡ್ ಎಕ್ಸ್‌ಫ್ಲೋರ್‌’ ಜಾಗತಿಕ ಸರಣಿ ಕಾರ್ಯಕ್ರಮ ಏರ್ಪಡಿಸಿದೆ.

ಈ ಉಚಿತ ಸರಣಿ ಕಾರ್ಯಕ್ರಮವು ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಉದ್ಯೋಗದಾತರಿಗೆ ಅಗತ್ಯ ನೆರವು ನೀಡಲಿದೆ. ಈ ಕಾರ್ಯಕ್ರಮವನ್ನು ಸ್ಥಳೀಯ ಅಗತ್ಯಗಳನ್ನು ಆಧರಿಸಿ, ದುಡಿಯುವ ವರ್ಗ ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ.

ನೇಮಕಾತಿ ಮತ್ತು ವಿವಿಧ ಹಂತದಲ್ಲಿ ಎದುರಾಗುವ ಸವಾಲು ಎದುರಿಸುವ ಕುರಿತು ಉಪನ್ಯಾಸವೂ ಇರಲಿದೆ. ಇದರಿಂದ  ಉದ್ಯೋಗ ಅರಸುವವರು ತಮ್ಮ ಕೌಶಲ್ಯ ಆಧರಿಸಿ ಸೂಕ್ತ ಉದ್ಯೋಗ ಪಡೆಯಲು ನೆರವಾಗಲಿದೆ. ಮಾಹಿತಿಗೆ indeed.com ಅಂತರ್ಜಾಲ ತಾಣ ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry