ಕನ್ನಡಕಧಾರಿಗಳ ದಿಂಬು

7

ಕನ್ನಡಕಧಾರಿಗಳ ದಿಂಬು

Published:
Updated:
ಕನ್ನಡಕಧಾರಿಗಳ ದಿಂಬು

ಆರಾಮಾಗಿ ಮಲಗಿ ಟಿ.ವಿ ನೋಡುವುದು ಅಥವಾ ಪುಸ್ತಕ ಓದುವುದು ಒಂದು ರೀತಿಯ ರಿಲಾಕ್ಸೇಷನ್. ಆದರೆ ಹೀಗೆ ಮಾಡುವುದು ಕನ್ನಡಕ ಧರಿಸಿದವರಿಗೆ ಸುಲಭವಲ್ಲ.

ಒಂದು ಬದಿ ತಿರುಗುತ್ತಿದ್ದಂತೆ ಕನ್ನಡಕ ಕಳಚಿ ಬೀಳುತ್ತದೆ. ಹಾಗೋ ಹೀಗೋ ಹೊಂದಿಕೊಂಡರೂ ಸ್ವಲ್ಪ ಸಮಯಕ್ಕೇ ಕಣ್ಣಿನ ಬದಿಗಳಲ್ಲಿ ಕನ್ನಡಕ ಒತ್ತಲು ಆರಂಭಿಸುತ್ತದೆ. ಕನ್ನಡಕ ಧರಿಸಿ ಮಲಗಿಕೊಳ್ಳುವುದೇ ದೊಡ್ಡ ತಾಪತ್ರಯ. ಇದಕ್ಕೊಂದು ಪರಿಹಾರವೇ ಇಲ್ಲವಾ ಎಂದುಕೊಳ್ಳುವವರನ್ನು ಉದ್ದೇಶವಾಗಿಟ್ಟುಕೊಂಡೇ ಈ ಹೊಸ ಶೈಲಿಯ ದಿಂಬನ್ನು ವಿನ್ಯಾಸಗೊಳಿಸಲಾಗಿದೆ. ಅದರ ಹೆಸರು ಲೇಸೀ ಪಿಲ್ಲೊ.

ಕನ್ನಡಕಕ್ಕೂ ತೊಂದರೆಯಾಗದೇ, ಅದರಿಂದ ನಿಮಗೂ ತೊಂದರೆಯಾಗದಂತೆ ತಡೆಯುವುದು ಇದರ ಉದ್ದೇಶ.  ಕತ್ತು ಹಾಗೂ ತಲೆಗೂ ಆರಾಮವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಬೆಲೆ ಅಂದಾಜು 5,0000 ರೂಪಾಯಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry