ರೈತನ ನೋವಿಗೆ ಕನ್ನಡಿ

ಶುಕ್ರವಾರ, ಮಾರ್ಚ್ 22, 2019
27 °C

ರೈತನ ನೋವಿಗೆ ಕನ್ನಡಿ

Published:
Updated:
ರೈತನ ನೋವಿಗೆ ಕನ್ನಡಿ

ರೈತರ ಸಾವು ಇಂದು ಎಲ್ಲ ಕಲಾವಿದರನ್ನೂ ಕಾಡುವ ಸಂಗತಿ. ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ಹಲವಾರು ಸಿನಿಮಾಗಳು ಬಂದಿವೆ. ಆದರೆ ಸಮಸ್ಯೆ ಮಾತ್ರ ತೀರಿಲ್ಲ. ಹಾಗಾಗಿಯೇ ಅದು ಇನ್ನೂ ಹಲವು ಸೃಜನಶೀಲ ವ್ಯಕ್ತಿಗಳನ್ನು ಕಾಡುವ ವಸ್ತುವಾಗಿ ಉಳಿದುಕೊಂಡಿದೆ. ಇದೇ ಸಮಸ್ಯೆಯನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದ್ದಾರೆ ರಾಜ್‌ವೀರ್‌. ಅವರೇ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಫೈಟರ್‌ ಆಗಿ, ಸಹಕಲಾವಿದ ಆಗಿ ಸಕ್ರಿಯರಾಗಿರುವ ಅವರು, ಹದಿನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ‘ರೋಷಾಗ್ನಿ’ ಎಂಬ ಚಿತ್ರದ ನಂತರ ಚಿತ್ರರಂಗದಿಂದ ಕೊಂಚ ದೂರವೇ ಉಳಿದುಕೊಂಡಿದ್ದರು.

ಈಗ ರೈತರ ಸಮಸ್ಯೆ, ಪರಿಸರ ಕಾಳಜಿ ಇರುವ ‘ಪರಬ್ರಹ್ಮ ಸ್ವರೂಪಂ’ ಎನ್ನುವ ಚಿತ್ರದ ಮೂಲಕ ಮರಳಿದ್ದಾರೆ. ಈ ಚಿತ್ರ ಮಾರ್ಚ್‌ 9ಕ್ಕೆ ಬಿಡುಗಡೆ ಮಾಡುವ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದಾರೆ.

ಬಡವರ ಕಥೆಯನ್ನು ಕಡಿಮೆ ಬೆಲೆಗೆ ಹೆಚ್ಚು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಟಿಕೆಟ್‌ ದರವನ್ನು ಅರ್ಧಬೆಲೆಗೆ ಮಾರಾಟ ಮಾಡಲೂ ಅವರು ಯೋಜನೆ ಹಾಕಿಕೊಂಡಿದ್ದಾರೆ.

‘ರೈತರ ಮಕ್ಕಳು ಸಾಯಬಾರದು’ ಎಂಬುದು ಈ ಚಿತ್ರದ ಒನ್‌ಲೈನ್‌ ಸ್ಟೋರಿ. ಈ ಮೂಲಕ ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳಲು ಅವರು ಯತ್ನಿಸಿದ್ದಾರೆ. ಲಂಚಾವತಾರದ ವಿರುದ್ಧ ಹೋರಾಡಿ ನ್ಯಾಯಕ್ಕೆ ಗೆಲುವು ತಂದುಕೊಡುವ ಪಾತ್ರದಲ್ಲಿ ಸಂತೋಷ್‌ ನಟಿಸಿದ್ದಾರೆ. ಮರಗಳನ್ನು ಬೆಳೆಸಿ ಎಂಬ ಸಂದೇಶ ಸಾರುವ ನಾಯಕಿಯಾಗಿ ಆಶಾ ನಟಿಸಿದ್ದಾರೆ. ತಂದೆಯ ಕನಸಿಗೆ ಮಗ ಸೂರ್ಯರಾಜ್‌ ಸಂಗೀತದ ಬೆಂಬಲ ಕೊಟ್ಟಿದ್ದಾರೆ. ಜತೆಗೆ ಸಂಕಲನ, ಛಾಯಾಗ್ರಹಣದ ಜವಾಬ್ದಾರಿಯನ್ನೂ ಅವರೇ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry