ಈ ತಮಾಷೆ ನಿಲ್ಲಲಿ

4

ಈ ತಮಾಷೆ ನಿಲ್ಲಲಿ

Published:
Updated:

ಉತ್ತರ ಭಾರತದ ರಾಜಕೀಯ ಧುರೀಣರ ಬಾಯಿಯಿಂದ ಒಂದೆರಡು ಕನ್ನಡ ಮಾತುಗಳನ್ನು ಆಡಿಸಿ, ಸೇರಿದ ಜನರಿಂದ ಚಪ್ಪಾಳೆ ಗಿಟ್ಟಿಸಿ ಕನ್ನಡಿಗರ ಮನಗೆಲ್ಲುವ ಪ್ರಯತ್ನವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ.‌

ವರ್ಷಪೂರ್ತಿ ಕನ್ನಡವನ್ನು ಕಡೆಗಣಿಸುವ ಮತ್ತು ಹಂತ ಹಂತವಾಗಿ ಹಿಂದಿಯನ್ನು ಕನ್ನಡಿಗರ ಮೇಲೆ ಹೇರುವ ಕೆಲಸವನ್ನು ಹಿಂದಿನ ಬಾಗಿಲಿನಿಂದ ಮಾಡುವ ಈ ಪಕ್ಷಗಳ ನಾಯಕರು, ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಈ ಕೆಲಸವನ್ನು ಬಿಡಲಿ. ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕುಗಳು ಮತ್ತು ಹೆದ್ದಾರಿ ಪಕ್ಕದ ಸೂಚನಾ ಫಲಕಗಳಲ್ಲಿ ಕನ್ನಡವನ್ನೇ ಬಳಸಲು ಒತ್ತಾಯಿಸಲಿ. ಈ ಪಕ್ಷಗಳ ಸ್ಥಳೀಯ ನಾಯಕರು ಈ ನಿಟ್ಟಿನಲ್ಲಿ ಬದ್ಧತೆಯನ್ನು ತೋರಿಸಲಿ.

ಕಾಟಾಚಾರಕ್ಕಾಗಿ ಕನ್ನಡ ಮಾತನಾಡಿಸುವ ಈ ತಮಾಷೆಯನ್ನು ಸಾಕು ಮಾಡಿ. ಕನ್ನಡಿಗರ ಪ್ರಬುದ್ಧತೆಯನ್ನು ಅಪಹಾಸ್ಯ ಮಾಡಬೇಡಿ.

–ರಮಾನಂದ ಶರ್ಮಾ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry