ಶಾ ವಾಸ್ತವ್ಯಕ್ಕೆ ₹1.5 ಲಕ್ಷ ಬಾಡಿಗೆಯ ಬಂಗಲೆ

7

ಶಾ ವಾಸ್ತವ್ಯಕ್ಕೆ ₹1.5 ಲಕ್ಷ ಬಾಡಿಗೆಯ ಬಂಗಲೆ

Published:
Updated:
ಶಾ ವಾಸ್ತವ್ಯಕ್ಕೆ ₹1.5 ಲಕ್ಷ ಬಾಡಿಗೆಯ ಬಂಗಲೆ

‌ಬೆಂಗಳೂರು: ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲೇಬೇಕು ಎಂದು ಪಣ ತೊಟ್ಟಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಹೆಚ್ಚಿನ ಅವಧಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಶಾ ವಾಸ್ತವ್ಯಕ್ಕಾಗಿ ರೇಸ್‌ ಕೋರ್ಸ್‌ ರಸ್ತೆಯ ಸಮೀಪ ಇರುವ ಫೇರ್ ಫೀಲ್ಡ್‌ ಲೇಔಟ್‌ನಲ್ಲಿ  ತಿಂಗಳಿಗೆ ₹1.5 ಲಕ್ಷ ಬಾಡಿಗೆಯ ಮೂರು ಅಂತಸ್ತಿನ ಬೃಹತ್ ಐಷಾರಾಮಿ ಬಂಗಲೆಯನ್ನು ಗೊತ್ತು ಮಾಡಲಾಗಿದೆ. ಮೊದಲ ಮತ್ತು ಎರಡನೆ ಅಂತಸ್ತಿನಲ್ಲಿ ಒಟ್ಟು ಎಂಟು ಬೆಡ್ ರೂಂಗಳು ಈ ಬಂಗಲೆಯಲ್ಲಿವೆ. 40 ರಿಂದ 50 ಜನರು ಸೇರಿ ಸಭೆ ನಡೆಸಲು ಅವಕಾಶ ಇರುವ ಸಭಾಂಗಣವೂ ಇದೆ.

ಗುಜರಾತ್‌ನವರಾದ ಪ್ರೀತಿ ನಲ್ವಾಣಿ ಎಂಬುವರಿಗೆ ಸೇರಿದ ಈ ಮನೆಯಲ್ಲಿ ಶಾ ಉಳಿದುಕೊಳ್ಳಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ, ಈ ಮನೆಯಲ್ಲಿ ಬಾಡಿಗೆಗೆ ಇದ್ದರು.

ಚುನಾವಣಾ ಕಾರ್ಯತಂತ್ರ ಹೆಣೆಯಲು, ನಾಯಕರ ಜತೆ ಸಮಾಲೋಚನೆ ನಡೆಸುವ ಸಲುವಾಗಿ ಎರಡು ತಿಂಗಳು ಇಲ್ಲೇ ಇರಬೇಕಾಗುತ್ತದೆ. ಯಾವುದಾದರೂ ತಾರಾ ಹೋಟೆಲ್‌ನಲ್ಲಿ ಉಳಿದುಕೊಂಡರೆ ಖಾಸಗಿ ಸಭೆಗಳಿಗೆ ಅಡಚಣೆಯಾಗುತ್ತದೆ. ಜತೆಗೆ ಭದ್ರತೆಯ ದೃಷ್ಟಿಯಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕಾರಣಕ್ಕೆ ಪ್ರತ್ಯೇಕ ಬಂಗಲೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry