ಲೇಖಕಿಯರ ಸಂಘಕ್ಕೆ ಮಾ.4ರಂದು ಚುನಾವಣೆ

ಗುರುವಾರ , ಮಾರ್ಚ್ 21, 2019
32 °C

ಲೇಖಕಿಯರ ಸಂಘಕ್ಕೆ ಮಾ.4ರಂದು ಚುನಾವಣೆ

Published:
Updated:
ಲೇಖಕಿಯರ ಸಂಘಕ್ಕೆ ಮಾ.4ರಂದು ಚುನಾವಣೆ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಾರ್ಚ್‌ 4ರಂದು ಚುನಾವಣೆ ನಡೆಯಲಿದೆ. ಹಿರಿಯ ಪತ್ರಕರ್ತೆ ಡಾ. ಆರ್.ಪೂರ್ಣಿಮಾ ಮತ್ತು ಸಂಘದ ಹಾಲಿ ಉಪಾಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌ ಕಣದಲ್ಲಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 3ರವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಕೀಲೆ ಅಂಜಲಿ ರಾಮಣ್ಣ ಚುನಾವಣಾಧಿಕಾರಿಯಾಗಿದ್ದಾರೆ. ಅಂದೇ ಸಂಜೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕರ್ನಾಟಕ ಲೇಖಕಿಯರ ಸಂಘದ ಒಟ್ಟು ಸದಸ್ಯರ ಸಂಖ್ಯೆ 913. ಇದರಲ್ಲಿ ಬೆಂಗಳೂರಿನಲ್ಲಿರುವ ಸದಸ್ಯರ ಸಂಖ್ಯೆ 529. ಬೇರೆ ಜಿಲ್ಲೆಗಳಲ್ಲಿ 384 ಸದಸ್ಯರಿದ್ದಾರೆ. ಬೆಂಗಳೂರಿನಿಂದ ಹೊರಗಿರುವವರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಫೆ.23ರಂದೇ ಅಂಚೆ ಮತಪತ್ರ ರವಾನೆಯಾಗಿದೆ. ಮಾ.3ರ ಸಂಜೆ 5ರ ಒಳಗಾಗಿ ಸಂಘದ ವಿಳಾಸಕ್ಕೆ ತಲುಪಿದ ಮತಪತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಬೆಂಗಳೂರಿನಲ್ಲಿರುವ ಸದಸ್ಯರು ಖುದ್ದು ಬಂದು ಮತದಾನ ಮಾಡಬೇಕು ಎಂದು ಅವರು ಕೋರಿದ್ದಾರೆ.

ಲೇಖಕಿಯರ ಸಂಘಕ್ಕೆ ಸದಸ್ಯರಾಗಿ ಒಂದು ವರ್ಷ ಪೂರೈಸಿದವರಿಗೆ ಮಾತ್ರ ಮತದಾನದ ಹಕ್ಕಿದೆ. 2016 ಏಪ್ರಿಲ್‌ಗೂ ಮುಂಚಿತವಾಗಿ ಸದಸ್ಯರಾಗಿರುವವರು ಮಾತ್ರ ಈ ಬಾರಿ ಮತದಾನ ಮಾಡಲು ಅರ್ಹರಾಗಿರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry