ಎಚ್‌1ಬಿ: ನಿಯಮ ಬದಲಾವಣೆ ಸದ್ಯಕ್ಕಿಲ್ಲ

7

ಎಚ್‌1ಬಿ: ನಿಯಮ ಬದಲಾವಣೆ ಸದ್ಯಕ್ಕಿಲ್ಲ

Published:
Updated:
ಎಚ್‌1ಬಿ: ನಿಯಮ ಬದಲಾವಣೆ ಸದ್ಯಕ್ಕಿಲ್ಲ

ವಾಷಿಂಗ್ಟನ್‌: ಎಚ್‌1ಬಿ ವೀಸಾ ಹೊಂದಿರುವವರ ಪತ್ನಿ ಅಥವಾ ಪತಿಗೆ ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ನಿಯಮ ರದ್ದುಗೊಳಿಸುವ ನಿರ್ಧಾರವನ್ನು ಡೊನಾಲ್ಡ್ ಟ್ರಂಪ್ ಆಡಳಿತ ಮುಂದೂಡಿದೆ. ಇದರಿಂದಾಗಿ ಅಮೆರಿಕದಲ್ಲಿರುವ ಅಸಂಖ್ಯಾತ ಭಾರತೀಯ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ನಿಟ್ಟುಸಿರು ಬಿಡುವಂತಾಗಿದೆ.

ಎಚ್‌1ಬಿ ವೀಸಾ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಪರಿಶೀಲಿಸುವುದು ಅಗತ್ಯವಿರುವ ಕಾರಣ ಜೂನ್‌ವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಆಂತರಿಕ ಭದ್ರತಾ ಇಲಾಖೆ ತಿಳಿಸಿದೆ.

‘ಗ್ರೀನ್‌ ಕಾರ್ಡ್‌ ನಿರೀಕ್ಷೆಯಲ್ಲಿರುವವರು ಅಥವಾ ಎಚ್‌1ಬಿ ವೀಸಾ ಹೊಂದಿರುವವರ ಪತ್ನಿ ಅಥವಾ ಪತಿ ಎಚ್–4 ಡಿಪೆಂಡೆಂಟ್ ವೀಸಾ ಪಡೆಯಲು ಅರ್ಹರು’ ಎಂಬ ನಿಯಮವನ್ನು ಹಿಂದಿನ ಒಬಾಮ ಸರ್ಕಾರ 2015ರಲ್ಲಿ ರೂಪಿಸಿತ್ತು.

ಅಮೆರಿಕ ನಾಗರಿಕರ ಉದ್ಯೋಗಕ್ಕೆ ಅಡ್ಡಿಯಾಗಿರುವ ಈ ನಿಯಮವನ್ನು ತೆಗೆದುಹಾಕುವಂತೆ ಆಗ್ರಹಿಸಿ 2015ರಲ್ಲೇ ‘ಉದ್ಯೋಗ ಉಳಿಸಿ ಯುಎಸ್‌ಎ’ ಎನ್ನುವ ಸಂಘಟನೆ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry