ರಾಜ್ಯದ ಮೇಲೆ ಪರಿಣಾಮ ಇಲ್ಲ: ಖರ್ಗೆ

ಬುಧವಾರ, ಮಾರ್ಚ್ 27, 2019
22 °C

ರಾಜ್ಯದ ಮೇಲೆ ಪರಿಣಾಮ ಇಲ್ಲ: ಖರ್ಗೆ

Published:
Updated:
ರಾಜ್ಯದ ಮೇಲೆ ಪರಿಣಾಮ ಇಲ್ಲ: ಖರ್ಗೆ

ದಾವಣಗೆರೆ: ‘ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳು ನಮಗೆ ಆಯಾ ರಾಮ್‌... ಗಯಾ ರಾಮ್‌ ಎಂಬಂತಿದ್ದು, ನಮ್ಮ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತ್ರಿಪುರಾದಲ್ಲಿ ಕಮ್ಯುನಿಸ್ಟ್‌ ಸರ್ಕಾರದ ಆಡಳಿತ ಇತ್ತು. ಅದೀಗ ಬಿಜೆಪಿ ಪಾಲಾಗಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲಿ ನಾವೇ ಸರ್ಕಾರ ರಚಿಸುತ್ತೇವೆ’ ಎಂದರು.

ರಾಜ್ಯದಲ್ಲೂ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಇಲ್ಲದ ಒಡಕನ್ನು ಇದೆ ಎಂದು ಬಿಂಬಿಸಲು ಮಾಧ್ಯಮ ಹಾಗೂ ಬಿಜೆಪಿ ಪ್ರಯುತ್ನಿಸುತ್ತಿವೆ ಎಂದು ಆರೋಪಿಸಿದ ಖರ್ಗೆ, ‘ಬಿಜೆಪಿಯವರ ತಂತ್ರಗಳಿಗೆ ನಾವು ಹೆದರುವುದಿಲ್ಲ. ನಮ್ಮ ಶಾಸಕರನ್ನು ಸೆಳೆಯಲು ಅವರು ಎಷ್ಟೇ ಪ್ರಯತ್ನಪಟ್ಟರೂ ಅವರತ್ತ ಯಾರೂ ಸುಳಿಯುವುದಿಲ್ಲ’ ಎಂದರು.

ಮುಂದಿನ ಸಿ.ಎಂ ಯಾರು ಎಂಬ ಪ್ರಶ್ನೆಗೆ, ‘ಇದನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಎಲ್ಲರೂ ಸೇರಿ ಚುನಾವಣೆ ಎದುರಿಸುತ್ತೇವೆ. ಟಿಕೆಟ್‌ ಹಂಚಿಕೆಗೆ ಪರಿಶೀಲನಾ ಸಮಿತಿ ಮಾಡಿದ್ದೇವೆ. ಶೀಘ್ರದಲ್ಲಿಯೇ ಹಂಚಿಕೆ ಮಾಡಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry